ಯಾರಿಗೆ ಲಾಭ ಯಾರಿಗೆ ನಷ್ಟ ಏನಾಗಲಿದೆ ಈ ವಾರ

Spread the love

ಪ್ರತೀವಾರ ಆರಂಭ ಆಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು, ಲಾಭ-ನಷ್ಟದ ಬಗ್ಗೆ ತಿಳಿದುಕೊಳ್ಳು ಕಾತುರವಿರುತ್ತದೆ. ಇಂತಹ ಕುತೂಹಲಗಳಿಗೆ ಉತ್ತರವನ್ನು ನೀಡುತ್ತದೆ ಜ್ಯೋತಿಷ್ಯಶಾಸ್ತ್ರ.

ಗ್ರಹಗತಿಗಳು ಬದಲಾದಂತೆಲ್ಲ ಮನುಷ್ಯನ ಜೀವನದಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಇವು ಕೆಲವೊಮ್ಮೆ ಶುಭ ಸಂದೇಶಗಳನ್ನು ತರಬಹುದು. ಇನ್ನೂ ಕೆಲವೊಮ್ಮೆ ಸಮಸ್ಯೆಗಳನ್ನು ಕಷ್ಟದ ದಿನಗಳನ್ನು ತರಬಹುದು. ಮುಂದಿನ ವಾರ ದ್ವಾದಶಿ ರಾಶಿಗಳ ಭವಿಷ್ಯವೂ ಬದಲಾಗುತ್ತದೆ. ಗ್ರಹಗಳ ಸ್ಥಾನಪಲ್ಲಟದಿಂದಾಗಿ ಜೀವನದಲ್ಲಿ ಕೆಲ ಏಳು ಬೀಳುಗಳಾಗುವುದು ಸಹಜ ಪ್ರಕ್ರಿಯೆಯಾಗಿದೆ. ಮತ್ತೊಂದು ವಿಚಾರವೆಂದರೆ ಗ್ರಹಗತಿಗಳ ಬದಲಾವಣೆಯಿಂದಾಗಿ ಮನುಷ್ಯನ ಆತ್ಮವಿಶ್ವಾಸ ಕೊರತೆ, ಚಿಂತೆ, ಹಾಗೂ ಗೊಂದಲಗಳಿಗೂ ಕಾರಣವಾಗಬಹುದು. ಕೆಲ ರಾಶಿ ಚಕ್ರಗಳಿಗೆ ಉತ್ತಮ ಸಂದೇಶವನ್ನು ನೀಡಿದರೆ ಇನ್ನೂ ಕೆಲ ರಾಶಿ ಚಕ್ರಗಳ ಮೇಲೆ ಕೆಲ ವಿಚಾರದಲ್ಲಿ ಕೆಟ್ಟ ಪರಿಣಾಮಗಳು ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಯಾವ ರಾಶಿಯವರ ಜೀವನದಲ್ಲಿ ಏ.24 ರಿಂದ ಏ.30ರವರೆಗೆ ಉತ್ತಮ ಲಾಭ ಪಡೆಯಲಿದ್ದಾರೆ.. ಯಾವ ರಾಶಿಯವರು ದುರಾದೃಷ್ಟ ಹೊಂದಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ಮೇಷ :
ಏಪ್ರಿಲ್ 30 ರಂದು ಬರುವ ಸೂರ್ಯ ಗ್ರಹಣವು ನೀವು ಹೇಗೆ ಹಣವನ್ನು ಗಳಿಸುತ್ತೀರಿ, ಹೇಗೆ ಉಳಿಕೆ ಮಾಡುತ್ತೀರಿ ಅಥವಾ ಹಣವನ್ನು ಹೇಗೆ ಖರ್ಚು ಮಾಡುತ್ತೀರಿ ಎಂಬ ವಿಚಾರದಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲಿದೆ. ಹಾಗೆಯೇ ನಿಮ್ಮ ಸ್ಥಾನಮಾನದಲ್ಲಿ ಬದಲಾವಣೆಯಾಗಲಿದೆ. ಒಟ್ಟಿನಲ್ಲಿ ಈ ವಾರ ನಿಮಗೆ ಸವಾಲಿನಿಂದ ಕೂಡಿದೆ. ನಿಮ್ಮ ಸ್ವಾತಂತ್ರ್ಯವೇ ನಿಮಗೆ ಸವಾಲಾಗಲಿದೆ. ಈ ವಾರ ನೀವು ಇತರರೊಂದಿಗೆ ನಿಮ್ಮನ್ನು ಹೋಲಿಕೆ ಮಾಡುವುದನ್ನು ತಪ್ಪಿಸಿ. ಯಾಕೆಂದರೆ ಇತರರೊಂದಿಗೆ ನೀವು ಹೋಲಿಕೆ ಮಾಡಿಕೊಂಡು ಅವರಂತೆ ನಡೆಯಲು ಹೋದರೆ ತೊಂದರೆ ಉಂಟಾಗಲಿದೆ. ನೀವು ತಪ್ಪಿಸಿಕೊಳ್ಳಲು ಸಾಧ್ಯವಾಗದ ಸುಳಿಗೆ ಬೀಳುವಿರಿ, ಎಚ್ಚರ.

ವೃಷಭ :

ಏಪ್ರಿಲ್ 30 ರಂದು ಸೂರ್ಯಗ್ರಹಣವು ನಿಮ್ಮ ರಾಶಿಯಲ್ಲಿ ಪ್ರಭಾವ ಬೀರುವ ಕಾರಣದಿಂದಾಗಿ ಈ ವಾರ ಮಕ್ಕಳು ಮುಖ್ಯ ಪಾತ್ರವನ್ನು ವಹಿಸಲಿದ್ದಾರೆ. ನೀವು ಅಹಿತಕರ ಬದಲಾವಣೆಯನ್ನು ತಪ್ಪಿಸಿಕೊಳ್ಳಬಹುದು. ನೀವು ಯಾವ ಸ್ಥಾನದಲ್ಲಿ ಇರುವಿರೋ ಆ ಸ್ಥಾನದಲ್ಲೇ ಶಾಶ್ವತವಾಗಿ ಉಳಿಯಬಹುದು. ಸುಲಭವಾದ ಯಾವುದನ್ನಾದರೂ ಪ್ರಾರಂಭಿಸಿ. ಸುಲಭವಾದ ಹೊಸ ಕಾರ್ಯವನ್ನು ಮಾಡಿ. ಇದರಿಂದಾಗಿ ನಿಮ್ಮ ಮನಸ್ಸಿಗೆ ತೃಪ್ತಿ ದೊರೆಯಲಿದೆ.

ಮಿಥುನ :

ಸೂರ್ಯಗ್ರಹಣದಿಂದಾಗಿ ಮಿಥುನ ರಾಶಿಯ ಜನರಲ್ಲಿ ಉಂಟಾಗುವ ಬದಲಾವಣೆಯನ್ನು ಅವರು ನಿಯಂತ್ರಿಸಲು ಕೂಡಾ ಸಾಧ್ಯವಾಗದು. ನೀವು ನಿಮ್ಮ ಗುರಿಯ ವಿಚಾರದಲ್ಲಿ ಆಗುವ ಬದಲಾವಣೆಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಮುಂದಿನ ಜೀವನದ ಬಗ್ಗೆಯಷ್ಟೇ ಆಲೋಚನೆ ಮಾಡಿ. ನಿಮಗೆ ಯಾವುದು ದಕ್ಕುವುದಿಲ್ಲವೋ ಅದನ್ನು ದಕ್ಕಿಸಿಕೊಳ್ಳಲು ಪ್ರಯತ್ನ ಮಾಡುವುದು ವಿಫಲವಾಗಲಿದೆ. ನಿಮ್ಮ ಅಭಿಪ್ರಾಯವನ್ನು ನೀವು ದೃಢವಾಗಿ ವ್ಯಕ್ತಪಡಿಸಬಲ್ಲಿರಿ. ಈ ಸಮಯವು ಸ್ನೇಹಿತರೊಂದಿಗೆ ಮತ್ತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸರಿಯಾದ ಸಮಯವಾಗಿದೆ. ಯಾವುದಾದರು ಚಿಕಿತ್ಸೆ ಪಡೆಯಲು ಬಾಕಿ ಇದ್ದರೆ ಚಿಕಿತ್ಸೆ ಪೂರ್ತಿ ಮಾಡಲು ಕೂಡಾ ಉತ್ತಮ ಸಮಯವಾಗಿದೆ.

ಕರ್ಕಾಟಕ :
ಏಪ್ರಿಲ್ 30 ರಂದು ಆಗಲಿರುವ ಸೂರ್ಯಗ್ರಹಣವು ನಿಮ್ಮ ಸ್ನೇಹಿತರ ವಲಯದಲ್ಲಿ, ವೃತ್ತಿ ಸ್ಥಳದಲ್ಲಿ ಪ್ರಭಾವವನ್ನು ಬೀಳಲಿದೆ. ನಿಮ್ಮ ಸ್ವಂತ ಪ್ರಯತ್ನದಿಂದ ನೀವು ಹೊಸ ಉತ್ತುಂಗಕ್ಕೆ ತಲುಪಲಿದ್ದೀರಿ. ಈ ಗ್ರಹಣವು ನಿಮ್ಮ ವೈಯಕ್ತಿಕ ಬಿಕ್ಕಟ್ಟಿಗೆ ಕಡಿಮೆ ಪರಿಣಾಮ ಬೀರಲಿದೆ. ನಿಮ್ಮ ನೆರೆಹೊರೆಯವರಿಗಾಗಿ, ನೀವು ಸಹೋದ್ಯೋಗಿಗೆ ಸಹಾಯ ಮಾಡುತ್ತಿರಲಿ ಈ ವೇಳೆ ನಿಮ್ಮ ಕಾಳಜಿ ಬಹುಮುಖ್ಯವಾಗಿದೆ. ನಿಮ್ಮ ಸಲಹೆಯನ್ನು ಹಲವಾರು ಮಂದಿ ಪಡೆಯುತ್ತಾರೆ. ನೀವು ಜಂಭಕೊಚ್ಚಿಕೊಳ್ಳದೆ, ಸಲಹೆ ನೀಡಿ. ನಿಮಗೆ ತಿಳಿದಿರುವ ಮಾಹಿತಿ ಹಂಚಿಕೊಳ್ಳಿ.

ಸಿಂಹ :
30 ರಂದು ವೃಷಭ ರಾಶಿಯಲ್ಲಿ ಪ್ರಭಾವ ಬೀರುವ ಸೂರ್ಯಗ್ರಹಣವು ಸಿಂಹ ರಾಶಿಯವರ ಜವಾಬ್ದಾರಿಗಳಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ತರುತ್ತದೆ. ನೀವು ಸ್ವಲ್ಪ ಸಮಯದವರೆಗೆ ಅಧಿಕಾರದಲ್ಲಿ ಈ ಬದಲಾವಣೆಯನ್ನು ಹಂಬಲಿಸುತ್ತಿದ್ದರೂ, ಈ ಜವಾಬ್ದಾರಿ ಸಿಕ್ಕಿದಾಗ ಗಳಿಸಿದ್ದನ್ನು ಶಾಂತವಾಗಿ ನಿಭಾಯಿಸಲು ಕಷ್ಟಪಡುವಿರಿ. ನಿಮ್ಮ ಜವಾಬ್ದಾರಿಯನ್ನು ಆತುರದಿಂದ ನಿಭಾಯಿಸಲು ಮುಂದಾಗಬೇಡಿ. ನೀವು ಇದ್ದಕ್ಕಿದ್ದಂತೆ ಕೆಲಸದಲ್ಲಿ ಬಡ್ತಿ ಪಡೆಯಲಿದ್ದೀರಿ. ನಿಮ್ಮ ಸ್ನೇಹಿತರ ಪಾರ್ಟಿಯನ್ನು ಯೋಜನೆ ಮಾಡುವಿರಿ. ಆದರೆ ನೀವು ಮೌನವಾಗಿರಲು ಉತ್ತಮ ಸಮಯ ಇದಲ್ಲ. ನಿಮಗೆ ಅನೇಕ ಮಂದಿ ಸಹಾಯ ಮಾಡಲು ಸಿದ್ಧರಿದ್ದಾರೆ. ಅಂತಿಮವಾಗಿ ಜವಾಬ್ದಾರಿ ಬೇರೊಬ್ಬರಿಗೆ ಹೋಗದೆ ನಿಮ್ಮ ಕೈಯಲ್ಲೇ ಉಳಿಯಲಿದೆ.

ಕನ್ಯಾ :
ಈ ವರ್ಷ ಉಳಿದ ಭಾಗಗಳಲ್ಲಿ ನಿಮ್ಮ ಪ್ರಯಾಣ ಅಥವಾ ಶಿಕ್ಷಣ ಯೋಜನೆಗಳಿಗೆ ತೊಂದರೆ ಇದೆ ಎಂದು ನೀವು ಭಾವಿಸಿರಬಹುದು. ಆದರೆ ಏಪ್ರಿಲ್ 30 ರಂದು ಸೂರ್ಯಗ್ರಹಣವು ಕೊನೆಯ ಕ್ಷಣದಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಳಿದೆ. ನೀವು ಯಾವಾಗಲೂ ಪರಿಸ್ಥಿತಿಯ ನಿಯಂತ್ರಣದಲ್ಲಿರಲು ಬಯಸಿದರೂ, ಗ್ರಹಣವು ಸಮಯವನ್ನು ವೇಗಗೊಳಿಸುತ್ತದೆ. ತಡವಾದ ಪ್ರವಾಸ ಅಥವಾ ರದ್ದಾದ ತರಗತಿಯನ್ನು ನಡೆಸಲು ಇದು ಸಮಯವಾಗಿದೆ. ಈ ವಾರ ನೀವು ಕಂಡುಕೊಳ್ಳುವ ಸಂಗತಿಗಳು ನಿಮ್ಮಲ್ಲಿ ಆಧ್ಯಾತ್ಮಿಕ ಜಾಗೃತಿ ಉಂಟು ಮಾಡಲಿದೆ.

ತುಲಾ :

ಸೂರ್ಯಗ್ರಹಣದಿಂದಾಗಿ ನಷ್ಟ ನೀವೇ ಸಹಾಯ ಮಾಡದಿದ್ದರೆ ನೀವು ಯಾರಿಗೂ ಸಹಾಯ ಮಾಡಲು ಸಾಧ್ಯವಿಲ್ಲ. ಏಪ್ರಿಲ್ 30 ರಂದು ಸೂರ್ಯಗ್ರಹಣವು ನಿಮಗೆ ನಷ್ಟವನ್ನು ಉಂಟು ಮಾಡುತ್ತದೆ. ನಿಮ್ಮ ಬಗ್ಗೆ ಉತ್ತಮ ಕಾಳಜಿ ವಹಿಸುವುದು ಹೇಗೆ ಎಂಬುದನ್ನು ನೀವು ಕಲಿಯುತ್ತಿದ್ದೀರಿ. ಮುಂದಿನ ದಿನಗಳಲ್ಲಿ ನಿಮಗೆ ಆರ್ಥಿಕವಾಗಿ ಯಾವ ಅಂಶ ಪ್ರಭಾವ ಬೀರುತ್ತಿದೆ ಎಂಬುವುದು ತಿಳಿಯಲಿದೆ. ನಿಮಗೆ ಅಗತ್ಯವಿರುವುದನ್ನು ಒಪ್ಪಿಕೊಳ್ಳುವಷ್ಟು ದುರ್ಬಲರಾಗಿರುವಾಗ ನಿಮಗೆ ಸಹಾಯ ಮಾಡಲು ಯಾರು ಬಯಸುತ್ತಾರೆ ಎಂಬುವುದೇ ನಿಮಗೆ ಆಶ್ಚರ್ಯವಾಗಬಹುದು.

ವೃಶ್ಚಿಕ :
ನವೆಂಬರ್ ಮಧ್ಯದಲ್ಲಿ ಕೊನೆಯದಾದ ಒಂದು ಸಂಬಂಧವು ಈ ವಾರದ ಸೂರ್ಯಗ್ರಹಣದ ಸಮಯದಲ್ಲಿ ಮತ್ತೆ ಹಿಂದಿರುಗಲಿದೆ. ಪ್ರಣಯ ಜೀವನದಲ್ಲಿ ಮಹತ್ತರವಾದ ಬದಲಾವಣೆ ಉಂಟಾಗಲಿದೆ. ನಿಮ್ಮ ದೃಢವಾದ ನಿಷ್ಠೆಯು ನಿಮ್ಮೊಂದಿಗೆ ಪಾಲುದಾರರಾಗಲು ಯಾರಾದರೂ ಮುಂದೆ ಬರಲು ಸಹಾಯಕವಾಗಲಿದೆ. ಆದರೆ ಇದು ಬೇರೆಯವರ ಅಗತ್ಯಗಳಿಗೆ ಆದ್ಯತೆ ನೀಡುವ ಸಮಯವಲ್ಲ. ನೀವು ನಿಜವಾಗಿಯೂ ಬಯಸುವುದು ಏನು ಎಂದು ತಿಳಿಯಿರಿ. ಆ ಹಾದಿಯಲ್ಲೇ ಮುನ್ನಡೆಯಿರಿ.

ಧನು :
ಸಮಯ ಬಳಕೆಯ ಅಭಿಪ್ರಾಯ ಪಡೆಯಿರಿ
ಕೆಲಸದಲ್ಲಿ ಅಥವಾ ನಿಮ್ಮ ದೈನಂದಿನ ವೇಳಾಪಟ್ಟಿಯಲ್ಲಿ ಕೊನೆಯ ನಿಮಿಷದ ಬದಲಾವಣೆ ಆಗಲಿದೆ. ಸೂರ್ಯ ಗ್ರಹಣವು ನಿಮ್ಮ ಉತ್ತಮ ಯೋಜನೆಯು ಹಳಿತಪ್ಪುವಂತೆ ಮಾಡುತ್ತದೆ. ಮುಂಚಿನ ಹೆರಿಗೆ ರಜೆಯನ್ನು ತೆಗೆದುಕೊಳ್ಳುತ್ತಿರಲಿ ಅಥವಾ ಯಾವುದೇ ಬದಲಾವಣೆ ಆಗಲಿ ನಿಮ್ಮ ಜೀವನದಲ್ಲಿ ಅದು ಅಸ್ಥಿರತೆಯನ್ನು ಉಂಟು ಮಾಡಿದರೂ ಕೂಡಾ ಶಾಂತಿ ಮತ್ತು ನೆಮ್ಮದಿಯನ್ನು ತರಲಿದೆ. ನಿಮ್ಮ ಸಮಯವನ್ನು ನೀವು ಹೇಗೆ ಬಳಸಬೇಕು ಎಂಬುದರ ಕುರಿತು ನಿಮ್ಮ ಸಂಗಾತಿ, ನಿಮ್ಮ ಪತ್ನಿ ಅಥವಾ ನಿಮ್ಮ ತಾಯಿ ಕೂಡ ಸಾಕಷ್ಟು ಬಲವಾದ ಅಭಿಪ್ರಾಯವನ್ನು ಹೊಂದಿರಬಹುದು. ಆದರೆ ಯಾವುದು ಉತ್ತಮ ಎಂದು ನಿಮಗೆ ತಿಳಿದಿದೆ. ನಿಮ್ಮ ಮನಸ್ಸಲ್ಲಿ ಬಂದಿದ್ದನ್ನು ಪಾಲನೆ ಮಾಡಿ.

ಮಕರ :
ಪ್ರಣಯ ಜೀವನದಲ್ಲಿ ಗೊಂದಲಮಯ ತಿರುವು
ಏಪ್ರಿಲ್ 30 ರಂದು ಸೂರ್ಯಗ್ರಹಣವು ನಿಮ್ಮ ಪ್ರಣಯ ಜೀವನಕ್ಕೆ ಸಂತೋಷಕರ ಅಥವಾ ಗೊಂದಲಮಯ ತಿರುವನ್ನು ತರಲಿದೆ. ನವೆಂಬರ್‌ನಲ್ಲಿ ನಿಮ್ಮ ಜೀವನ ಸಂಗಾತಿ ನಿಮಗೆ ಸಿಕ್ಕಿದ್ದಾರೆ. ಅವರೊಂದಿಗೆ ಸಮಯ ಕಳೆಯಲಿದ್ದೀರಿ. ಪ್ರೌಢಶಾಲೆಯ ನಿಮ್ಮ ಪ್ರೀತಿ ಮತ್ತೆ ಮೊಳಕೆಯೊಡೆಯಲಿದೆ. ಇದಕ್ಕಿದ್ದಂತೆ ನಿಮ್ಮ ಜೀವನ ಸಂಗಾತಿ ಹಾಗೂ ಪ್ರೌಢಶಾಲೆಯ ಪ್ರೀತಿಯ ವಿಚಾರದಲ್ಲಿ ಗೊಂದಲ ಮೂಡಲಿದೆ. ಗ್ರಹಣಗಳು ಉತ್ತಮವಾಗಿರಲಿ ಅಥವಾ ಕೆಟ್ಟದಾಗಿರಲಿ ಅದೃಷ್ಟದ ಸಂದರ್ಭಗಳನ್ನು ತರುತ್ತವೆ.

ಕುಂಭ :
ಹಠಾತ್ ಬದಲಾವಣೆ ಏಪ್ರಿಲ್ 30 ರಂದು ಸೂರ್ಯಗ್ರಹಣವು ನಿಮ್ಮ ಮನೆಯಲ್ಲಿ ಹಠಾತ್ ಬದಲಾವಣೆಗಳನ್ನು ತರುತ್ತದೆ. ಆದರೆ ಕುಟುಂಬದೊಂದಿಗೆ ನಿಮ್ಮ ಸಂಬಂಧಗಳಲ್ಲಿ ಅಡಚಣೆಗಳನ್ನು ತರುತ್ತದೆ. ನಿಮ್ಮ ಸಹೋದರಿಯೊಂದಿಗಿನ ಉದ್ವಿಗ್ನತೆಗಳು ನಿಧಾನವಾಗಿ ಹೆಚ್ಚಳವಾಗುತ್ತಿದೆ. ಇದನ್ನು ನೀವು ತಿಳಿದಿದ್ದೀರಿ. ಆದರೆ ಪರಿಸ್ಥಿತಿಯನ್ನು ಈಗ ನಿಭಾಯಿಸುವುದು ಸುಲಭವಲ್ಲ. ಈ ಸಮಸ್ಯೆಯು ನೀವು ಮೂಲತಃ ಯೋಜಿಸಿದ್ದಕ್ಕಿಂತ ಹೆಚ್ಚು ಜಠಿಲವಾಗಿದೆ. ಇದು ಖಂಡಿತವಾಗಿಯೂ ನಿಮ್ಮ ಸಹಿಷ್ಣುತೆಯನ್ನು ಪರೀಕ್ಷಿಸಲು ಒಂದು ಕ್ಷಣವಾಗಿದೆ.

ಮೀನ :

ಹಲವಾರು ಅಡೆತಡೆ ಮೀನ ರಾಶಿಯವರು ಏಪ್ರಿಲ್ 30 ರಂದು ಹೆಚ್ಚು ನಿರೀಕ್ಷಿತ ಸೂರ್ಯಗ್ರಹಣದ ಪ್ರಭಾವಕ್ಕೆ ಒಳಗಾಗಲಿದ್ದೀರಿ. ಹಲವಾರು ಅಡೆತಡೆಗಳು ಉಂಟಾಗಲಿದೆ. ಅಡಿಪಾಯದಲ್ಲಿನ ಬಿರುಕುಗಳನ್ನು ಬಹಿರಂಗಪಡಿಸುವಲ್ಲಿ ಈ ಸೂರ್ಯ ಗ್ರಹಣವು ಪ್ರಭಾವವನ್ನು ಬೀರಲಿದೆ. ಬಹುಶಃ ನೀವು ಒಮ್ಮೆ ತುರ್ತು ಸಂಪರ್ಕ ಎಂದು ಪರಿಗಣಿಸಿದ ಹಳೆಯ ಸ್ನೇಹಿತ ನಿಜವಾಗಿಯೂ ನಿಮ್ಮ ಅಗತ್ಯದ ಸಮಯದಲ್ಲಿ ಇರುವುದಿಲ್ಲ. ಆದರೆ ನಿಮ್ಮ ಹೊಸ ನೆರೆಹೊರೆಯವರು ಸಹಾಯ ಮಾಡಲಿದ್ದಾರೆ. ಈ ಗ್ರಹಣವು ನಿಮ್ಮ ಸಹೋದರಿ ಅಥವಾ ಸ್ನೇಹಿತರಿಂದ ಕೆಲವು ಆಶ್ಚರ್ಯಕರ ಸುದ್ದಿಯನ್ನು ತರಲಿದೆ.


Spread the love

Leave a Reply

error: Content is protected !!