ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, 179 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಶಿವಸ್ವಾಮಿ.ಸಿ.ಬಿ. ಅವರನ್ನು ರಾಜ್ಯ ಗುಪ್ತವಾರ್ತೆಯಿಂದ ಹೈಗ್ರೌಂಡ್ ಠಾಣೆಗೆ, ಶಿವಕುಮಾರ್ ಎಂ. ಅವರನ್ನು ಎಸ್ ಜೆ ಪಾರ್ಕ್ನಿಂದ ಸಿಟಿ ಮಾರ್ಕೆಟ್ ಠಾಣೆಗೆ, ಚೈತನ್ಯ ಸಿ.ಜೆ. ಅವರನ್ನು ಅಶೋಕ್ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸ್ ಇನ್ಪಪೆಕ್ಟರ್ ಪ್ರಭು ಸೂರಿನ ಅವರನ್ನು ಸಿಸಿಗೆ ವರ್ಗಾವಣೆ ಮಾಡಲಾಗಿದೆ.
