ಭಾರೀ ಕುತೂಹಲ ಕೆರಳಿಸಿದ ವಿಶ್ವಸಂಸ್ಥೆ ಸೆಕ್ರೆಟರಿ ಉಕ್ರೇನ್ ಭೇಟಿ

Spread the love

ನ್ಯೂಯಾರ್ಕ್, ಅಮೆರಿಕ : ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಏಪ್ರಿಲ್ 28ರಂದು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಆಂಟೋನಿಯೊ ಗುಟೆರೆಸ್ ಮುಂದಿನ ವಾರ ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. ಅವರು ಉಕ್ರೇನ್​​ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರೊಂದಿಗೆ ಕಾರ್ಯಕಾರಿ ಸಭೆಯನ್ನು ನಡೆಸಲಿದ್ದಾರೆ ಮತ್ತು ಏಪ್ರಿಲ್ 28ರಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ನಂತರ ಉಕ್ರೇನ್​ನ ನೆರವಿನ ಕುರಿತು ಚರ್ಚಿಸಲು ಯುಎನ್ ಏಜೆನ್ಸಿಗಳ ಸಿಬ್ಬಂದಿಯನ್ನು ಭೇಟಿಯಾಗಲಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿ ಮಾಡಲು ಗುಟೆರಸ್ ರಷ್ಯಾಗೆ ಭೇಟಿ ನೀಡಲಿದ್ದಾರೆ ಎಂದು ಘೋಷಿಸಿದ ಕೆಲವೇ ಗಂಟೆಗಳ ನಂತರ ಉಕ್ರೇನ್​ಗೆ ಭೇಟಿ ನೀಡುವ ನಿರ್ಧಾರವನ್ನು ಘೋಷಿಸಲಾಯಿತು. ರಷ್ಯಾ ಕೂಡ ಆಂಟೋನಿಯೋ ಗುಟೆರಸ್ ಅವರ ಭೇಟಿಯನ್ನು ದೃಢಪಡಿಸಿದೆ.


Spread the love

About gcsteam

    Check Also

    ಬುರ್ಕಿನಾ ಫಾಸೋದಲ್ಲಿ ಜಿಹಾದಿಗಳಿಂದ ದಾಳಿ- 22 ಜನರು ಸಾವು

    Spread the loveಫಾಸೊ: ಬುರ್ಕಿನಾ ಫಾಸೋದಲ್ಲಿ ಜಿಹಾದಿಗಳು ಮತ್ತು ಸರ್ಕಾರದ ನಡುವಿನ ಸಮರಕ್ಕೆ ಅಮಾಯಕ ನಾಗರಿಕರ ಪ್ರಾಣಾರ್ಪ ಣೆಯಾಗುತ್ತಲೇ ಇದೆ. …

    Leave a Reply