Breaking News

ಸಿಎಂ ತವರು ಜಿಲ್ಲೆಯಲ್ಲಿ ಯುವತಿ ಅಪಹರಣ

Spread the love

ಹಾವೇರಿ: ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಯುವತಿಯ ಅಪಹರಣವಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಸವಣೂರು ತಾಲೂಕಿನ ಕಡಕೋಳದ 24 ವರ್ಷದ ಯುವತಿಯನ್ನು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಭಾಷಾ ರತನಖಾನ್ ಅಪಹರಿಸಿದ್ದಾನೆ ಎಂದು ಸವಣೂರು ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲು ಮಾಡಿದ್ದಾರೆ. ಯುವತಿ ಬಿಎಡ್ ಓದಿಕೊಂಡು ಅತಿಥಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಈ ಸಂದರ್ಭದಲ್ಲಿ ಪರಿಚಿತನಾದ ಭಾಷಾ ರತನಖಾನ್ ಯುವತಿಯನ್ನು ಇದೇ ತಿಂಗಳ 13 ರಂದು ರಾತ್ರಿ ಅಪಹರಿಸಿದ್ದಾನೆ ಪೋಷಕರು ತಿಳಿಸಿದ್ದಾರೆ.
ಘಟನೆ ಸಂಬಂಧ ಪೋಷಕರು ಹಾಗೂ ಕೆಲ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದ್ದಾರೆ. ಪೊಲೀಸರು ಈ ಸಂಬಂಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸವಣೂರು ಬಂದ್‌ಗೆ ಕರೆ ನೀಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.


Spread the love

About Karnataka Junction

[ajax_load_more]

Check Also

ಕೇಂದ್ರ ಬಜೆಟ್ ದೇಶದ ಸಮಗ್ರ ಅಭಿವೃದ್ದಿಗೆ ನೀಲನಕ್ಷೆ- ಡಾ. ಕ್ರಾಂತಿ ಕಿರಣ್

Spread the love  ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ನಿರ್ಮಾಣದ ಗುರಿಗೆ ಪೂರಕವಾಗಿ ಕೇಂದ್ರದ ವಿತ್ತ …

Leave a Reply

error: Content is protected !!