Breaking News

134 ಸಾಲಲ್ಲ 1000 ತನಕ ಬಂಧನವಾಗಬೇಕು, ನಾವು ಹೆಸರು ಕೊಡುತ್ತೇವೆ- ಪ್ರಮೋದ್ ಮುತಾಲಿಕ್

Spread the love

ಹುಬ್ಬಳ್ಳಿ :ಹಳೇ ಹುಬ್ಬಳ್ಳಿ ಗಲಭೆ ಘಟನೆಗೆ ಸಂಬಂಧಿಸಿದಂತೆ ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಹಿಂದೂಗಳನ್ನು ಭಯಭೀತಿಗೊಳಿಸುವ ಉದ್ದೇಶದಿಂದ ಗಲಭೆ ರೂಪಿಸಲಾಗಿದೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರರೊಂಧಿಗೆ ಮಾತನಾಡಿದ ಅವರು, ಎಐಎಂಐಎಂ ಹಾಗೂ ಕಾಂಗ್ರೆಸ್ ಪಕ್ಷದ ಕೈವಾಡವಿದ್ದು, ಕಾಂಗ್ರೆಸ್ ಮುಖಂಡರಾದ ಅಲ್ತಾಪ್ ಹಳ್ಳೂರ, ಅಲ್ತಾಪ್ ನವಾಜ್ ಎಂ. ಕಿತ್ತೂರ ಅವರನ್ನು ಬಂಧಿಸಬೇಕು. ಇವರಿಬ್ಬರು ಕುಮ್ಮಕ್ಕು ನೀಡಿ ಇಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ದೂರಿದರು.
ನಗರದ ಎಲ್ಲಾ ಭಾಗಗಳಿಂದ ಜನರು ಗಲಭಗೆ ಬಂದಿದ್ದಾರೆ. ಸರಕಾರ ಗಲಭೆಕೋರರ ವಿರುದ್ಧ ಕೋಟಾ ಕಾಯ್ದೆ ಹೇರಬೇಕು ಎಂದು ಒತ್ತಾಯಿಸಿದ ಅವರು, ಈ ಘಟನೆಗೆ ರಝಾ ಅಕಾಡೆಮಿ ಎಂಬ ಸಂಘಟನೆ ಕೈಜೋಡಿಸಿದೆ .
ಸರ್ಕಾರ ಕಠಿಣವಾದ ಕ್ರಮ ಜರುಗಿಸದಿದ್ದರೇ ಹಿಂದೂಗಳು ಸುಮ್ಮನೆ ಇರುವುದಿಲ್ಲ. ದೇವಸ್ಥಾನದ ಮೇಲಿನ ದಾಳಿ ಘಜ್ನಿ- ಘೋರಿ ಮನಸ್ಥಿತಿ ತೋರುತ್ತದೆ. ಗಲಭೆಗೆ ವಾಟ್ಸಾಪ್ ಸ್ಟೇಟಸ್ ಒಂದು ನೆಪ ಮಾತ್ರ ಮಸೀದಿ ಮೇಲೆ ಭಾಗವಾಧ್ವಜ ಹಾರಿಸಿದರೇ ಏನಾಗುತ್ತದೆ. ಬೆಂಗಳೂರಿನ ಮಸೀದಿ ಮೇಲೆ ಕೇಸರಿ ಧ್ವಜ, ಕೇಸರಿ ಹಿಜಾಬ್ ಹಾಕಿಲ್ಲವೇ ಎಂದು ಪ್ರಶ್ನಿಸಿದರು.
ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ರಿಸ್ಕ್ ತೆಗೆದುಕೊಂಡು ಕಂಟ್ರೋಲ್ ಮಾಡಿದ್ದಾರೆ ಪೊಲೀಸ್ ಕಾರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಮಸೀದಿ ಮೇಲಿನ ಮೈಕ್ ತೆರವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮಸೀದಿಗಳ ಮೇಲಿನ ಮೈಕ್ ತೆರವಿಗೆ ಸರ್ಕಾರ ಮುಂದಾಗಬೇಕಿದ್ದು, ಮೇ ೯ ರ ವರೆಗೆ ಕೊನೆಯ ಗಡವನ್ನು ನೀಡಲಾಗಿದೆ ಎಂದರು.
ಮೈಕ್ ತೆರವು ಮಾಡದಿದ್ದರೇ ನಾವು ಹಿಂದೂ ದೇವಸ್ಥಾನಗಳಲ್ಲಿ ಮೈಕ್ ಹಚ್ಚುತ್ತೇವೆ. ಅಂದು ಓಂಕಾರ, ಭಜನೆ, ಸುಪ್ರಭಾತ ಹೀಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಬೆಳಿಗ್ಗೆ ೫ ಗಂಟೆಯಿಂದಲ್ಲೇ ಭಕ್ತಿ ಗೀತೆಗಳು ಮೊಳಗಲಿವೆ ಎಂದರು.


Spread the love

About Karnataka Junction

[ajax_load_more]

Check Also

ರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕೆ

Spread the loveರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕ ಹುಬ್ಬಳ್ಳಿ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ …

Leave a Reply

error: Content is protected !!