ದಾವಣಗೆರೆ: ಒಂದಲ್ಲಾ ಒಂದು ವಿವಾದಿಂದ ಸುದ್ದಿಯಾಗುತ್ತಿರುವ ರೇಣುಕಾಚಾರ್ಯ ಈಗ ಮತ್ತೇ
ಕೋಟ್ಯಂತರ ರೂಪಾಯಿ ಬೆಲೆಬಾಳುವ ಮನೆ ನಿರ್ಮಾಣ ಮಾಡಿದ್ದು, ವಿವಾದಕ್ಕೆ ಕಾರಣ ಆಗಿದೆ. 38 ಗುಂಟೆ ಅಂದ್ರೆ ಹೆಚ್ಚು ಕಮ್ಮಿ ಒಂದು ಎಕರೆ ಪ್ರದೇಶದಲ್ಲಿ ಮನೆ ಕಟ್ಟಲಾಗುತ್ತಿದೆ. ಜೊತೆಗೆ ಇದರ ಅಕ್ಕಪಕ್ಕದ ಜಮೀನು ಕೂಡಾ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಎಂ.ಪಿ.ರೇಣುಕಾಚಾರ್ಯ ಅವರು ಹೊನ್ನಾಳಿ ಪಟ್ಟಣದ ನ್ಯಾಮತಿ ರಸ್ತೆಯಲ್ಲಿ ಸುಮಾರು 38 ಗುಂಟೆಯಲ್ಲಿನ ಮನೆ ನಿರ್ಮಾಣ ಮಾಡುತ್ತಿದ್ದಾರೆ. 30 ಗುಂಟೆಗೆ 60 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿರುವ ಅವರು, ಅದರ ಜೊತೆ ಅದರ ಸುತ್ತಲಿನ ಒಟ್ಟು ಐದು ಎಕರೆ ಐದು ಗುಂಟೆ ಜಮೀನು ಸಹ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.ರೇಣುಕಾಚಾರ್ಯ ವಿರುದ್ಧ ದೊಡ್ಡ ಕೆಂಚಮ್ಮ, ಗೀತಾ, ವನಜಾಕ್ಷಮ್ಮ ಹಾಗೂ ಪ್ರತಿಭಾ ಎಂಬ ನಾಲ್ವರು ಹೆಣ್ಣುಮಕ್ಕಳು ಜಮೀನು ವಿಚಾರವಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಜಮೀನು ಹೊನ್ನಾಳಿ ನಿವಾಸಿ ದಿವಂಗತ ಸಿದ್ದಪ್ಪ ಎಂಬುವರಿಗೆ ಅವರ ತಂದೆಯಿಂದ ಬಂದ ಆಸ್ತಿಯಾಗಿದ್ದು, ಸಿದ್ದಪ್ಪನಿಗೆ ದ್ಯಾಮಮ್ಮ, ದೊಡ್ಡ ಕೆಂಚಮ್ಮ ಹಾಗೂ ಸಣ್ಣ ಕೆಂಚಮ್ಮ ಎಂಬ ಮೂರು ಜನ ಹೆಂಡತಿಯರಿದ್ದರಂತೆ.
ಶಾಸಕ ಎಂ. ಪಿ ರೇಣುಕಾಚಾರ್ಯ ಮಾತನಾಡಿದರುಮೊದಲ ಹೆಂಡತಿಗೆ ಮಕ್ಕಳಿಲ್ಲ. ಹೀಗೆ ಎರಡು ಮತ್ತು ಮೂರನೇ ಹೆಂಡತಿಯರು ಒಟ್ಟು ನಾಲ್ಕು ಜನ ಮಕ್ಕಳು. 1992ರಲ್ಲಿ ಒಟ್ಟು ಆಸ್ತಿ ಹಿರಿಹೆಂಡತಿಗೆ ಒಂದು ಭಾಗ. ಮೊಮ್ಮಕ್ಕಳಿಗೆ ನಾಲ್ಕು ಐದು ಭಾಗ ಆಗಿತ್ತು. ಇದೇ ಪ್ರಕಾರ ಇವರು ಸೈಟ್ ಮಾಡಿಕೊಂಡು ಈ ಸ್ವತ್ತು ಸಹ ಅವರ ಹೆಸರಿನಲ್ಲಿಯೇ ಇತ್ತು. ಆದ್ರೆ ಈಗ ರೇಣುಕಾಚಾರ್ಯ ಅವರ ಹೆಸರು ಬಂದು ಬಿಟ್ಟಿದೆಯಂತೆ. ಇಲ್ಲಿ ಗೋಲ್ ಮಾಲ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಿದ್ದಪ್ಪನವರ ಮೂರನೇ ಪತ್ನಿ ಸಣ್ಣ ಕೆಂಚಮ್ಮನ ಹೆಸರಿನಿಂದ ಬೇರೆ ವ್ಯಕ್ತಿ ಸರಸ್ವತಿ ಎಂಬುವರ ಹೆಸರಿಗೆ ಜಮೀನು ಮಾಡಿ, ನಂತರ ರಾಘವೇಂದ್ರ ಶೆಟ್ಟಿಹಳ್ಳಿ ಎಂಬುವರ ಹೆಸರಿಗೆ ತಂದು ಅಲ್ಲಿಂದ ಶಾಸಕರು ಖರೀದಿ ಮಾಡಿದ್ದಾರೆ ಎಂದು ದಾಖಲೆ ಸೃಷ್ಠಿಸಿದ್ದಾರೆ. ಇದಕ್ಕೆ ಹೊನ್ನಾಳಿ ತಹಶೀಲ್ದಾರ ಆಗಿದ್ದ ಬಸನಗೌಡ ಕೊಟ್ಟೂರ ಸಹಕಾರ ನೀಡಿದ್ದಾರೆ ಎಂಬುದು ಮಹಿಳೆಯರ ಆರೋಪ.ಕೊರೊನಾ ಕಾಲದಲ್ಲಿ ರಾಜ್ಯದ ಗಮನ ಸೆಳೆಯುವ ಕಾರ್ಯ ಮಾಡಿದ್ದ ರೇಣುಕಾಚಾರ್ಯ ಅದೇ ಸಮಯ ಬಳಸಿಕೊಂಡು ಈ ಮಹಿಳೆಯಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
![](https://karnatakajunction.com/wp-content/uploads/2022/09/Renukacharya-1-800x445-1-660x330.jpg)