ಹುಬ್ಬಳ್ಳಿ; ನಗರದ ಕೇಶ್ವಾಪುರ ರಸ್ತೆಯಲ್ಲಿನ ರೈಲು ಮೈದಾನದಲ್ಲಿ ಶ್ರೀ ಪದ್ಮಶಾಲಿ ಸಮಾಜದ ವತಿಯಿಂದ ದಿ. ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ನೆನಪಿಗೆ ಅಂಗವಾಗಿ
ಶ್ರೀ ಮಾಕೇಂಡೇಶ್ವರ ಕಪ್ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿತ್ತು. ಸಮಾಜದ ಪ್ರಮುಖರು ಹಾಗೂ ಪದ್ಮಸಾಲಿ ಸಮಾಜದ ಅಧ್ಯಕ್ಷ
ಷಣ್ಮುಖ ನೀಲಗುಂದ ಟೂರ್ನಮೆಂಟ್ ಉದ್ಘಾಟನೆ ಮಾಡಿ ಮಾತನಾಡಿದರು. ಮುಖಂಡರಾದ ಅರವಿಂದ ಸಂಗೀತ, ರಾಮಣ್ಣ ಕರ್ಲಿ, ಗುರುನಾಥ ಕಿಚಡಿ, ಮಾರ್ಕೇಂಡೇಶ್ವರ ಬೆಳವಿನಾಳ ನೇತೃತ್ವ ವಹಿಸಿದ್ದರು. ಮುಖ ಅತಿಯಾಗಿ ಶಾಸಕ ಅಭ್ಯಯ್ಯಾ ಪ್ರಸಾದ್, ಭಾರತೀಯ ಜನತಾ ಪಕ್ಷದ ನಾಯಕ ಮಲ್ಲಪ್ಪ ಶಿರಕೋಳ ಹಾಗೂ ಪದ್ಮಸಾಲಿ ಸಮಾಜದ ಮುಖಂಡರು ಭಾಗವಹಿಸಿದ್ದರು.
ಟೋರ್ನಾಮೆಂಟ್ ನಂತರ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪದ್ಮಸಾಲಿ ಕಠಾರೆ ನಾಯಕರಿಂದ ಬಹುಮಾನ ವಿತರಣೆ ಮಾಡಲಾಯಿತು.
