ಗ್ರಾಮಕ್ಕೆ ರಸ್ತೆ ಕೇಳಿದ ಯುವಕನಿಗೆ ಎಂಎಲ್ಎಯಿಂದ ಕಪಾಳಮೋಕ್ಷ

Spread the love

ತುಮಕೂರು : ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಬೇಕೆಂದು ಯುವಕನೊಬ್ಬ ಮನವಿ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪಾವಗಡ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಪಾವಗಡ ತಾಲೂಕು ಕಚೇರಿ ಆವರಣದಲ್ಲಿ ಈ ಘಟನೆ ನಡೆದಿದೆ. ಶಾಸಕ ವೆಂಕಟರಮಣಪ್ಪ ಅವರು ಕಚೇರಿ ಆವರಣದಿಂದ ಕಾರಿನ ಬಳಿ ಬರುತ್ತಿದ್ದಂತೆ ಸಮೀಪ ತೆರಳಿದ ಯುವಕನೊಬ್ಬ ರಸ್ತೆ ಅಭಿವೃದ್ಧಿ ಕುರಿತಂತೆ ಮನವಿ ಮಾಡಿದ್ದಾನೆ. ಇದನ್ನು ಕೇಳಿದಾಕ್ಷಣ ಇದ್ದಕ್ಕಿದ್ದಂತೆ ಕಪಾಳಮೋಕ್ಷ ಮಾಡಿದ್ದಾರೆ.ನಂತರ ಸ್ಥಳೀಯರು ಯುವಕನನ್ನು ಸಮಾಧಾನಪಡಿಸಿ ದೂರ ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ ರಸ್ತೆ ಕಾಮಗಾರಿಗೆ ಈಗಾಗಲೇ ಟೆಂಡರ್​ ​ಆಗಿದೆ ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ ಎಂದು ಯುವಕನಿಗೆ ತಿಳಿಸಿದ್ದಾರೆ.

ರಸ್ತೆ ಕಾಮಗಾರಿಗೆ ಮನವಿ ಮಾಡಿದ್ದಕ್ಕೆ ಯುವಕನಿಗೆ ಪಟಾರ್​ ಎಂದು ಕೆನ್ನೆಗೆ ಭಾರಿಸಿದ ಶಾಸಕ ವೆಂಕಟರಮಣಪ್ಪ ಅತ್ತ ಕಾರಿನಲ್ಲಿ ಸ್ಥಳದಿಂದ ತೆರಳುತ್ತಿದ್ದಂತೆ ಯುವಕ ‘ದೊಡ್ಡವರು ಎಂದು ಸುಮ್ಮನಿದ್ದೇನೆ. ಇಲ್ಲದಿದ್ದರೆ ತಕ್ಕ ಶಾಸ್ತಿ ಮಾಡುತ್ತಿದ್ದೆ’ ಎಂದು ನೋವು ಹೊರ ಹಾಕಿದ್ದಾನೆ.


Spread the love

Leave a Reply

error: Content is protected !!