ಹುಬ್ಬಳ್ಳಿ : ಪಿಎಸ್ಐ ಅಕ್ರಮದ ಹೋರಾಟದಲ್ಲಿ ಎಎಪಿ ಧಾರವಾಡ ಪಕ್ಷ ಕಳೆದ ತಿಂಗಳು 23 ರಂದು 2 ದಿನಗಳ ಧರಣಿ ಸತ್ಯಾಗ್ರಹ ಮಾಡಿದ ನಂತರ ಇದಕ್ಕೆ ರಂಗೇರಿದ್ದು ಎಲ್ಲ ಪಕ್ಷಗಳೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದರಲ್ಲಿ ಧುಮುಕುತ್ತಿದ್ದಾರೆ. ಆದರೆ ನೊಂದ ರಾಜ್ಯದ ವಿದ್ಯಾರ್ಥಿಗಳಿಗೆ ಸಂತುಷ್ಟ ಆಗುವ ಹಾಗೆ ನಿಷ್ಪಕ್ಷಪಾತವಾಗಿ ಇದರ ತನಿಖೆ ಮಾಡಬೇಕೆಂದು ಯಾರಿಗೂ ಚಿಂತೆ ಇಲ್ಲ ಎಂದು ಆಪ್ ಆಕ್ರೋಶ ವ್ಯಕ್ತಪಡಿಸಿತು.
ಎಎಪಿ ಪಕ್ಷ ಒತ್ತಾಯಿಸುವದೇನೆಂದರೆ ಗೃಹ ಸಚಿವರು ರಾಜೀನಾಮೆ ನೀಡಬೇಕು ಮತ್ತು ಸಿಐಡಿಯಿಂದ ಸಿಬಿಐಗೆ ಒಪ್ಪಿಸಬೇಕು ಎಂದು ಅನಂತಕುಮಾರ್ ಬುಗಡಿ ಅಭಿಪ್ರಾಯಪಟ್ಟರು. ಈ ಸುದ್ದಿಗೋಷ್ಠಿಯಲ್ಲಿ ಅನಂತಕುಮಾರ ಬುಗಡಿ, ವಿಕಾಸ ಸೊಪ್ಪಿನ, ಎಜಾಜ್ ಶೇಖ್, ರೇವಣಸಿದ್ದಪ್ಪ ಹುಬ್ಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.