ಬಾಗಲಕೋಟೆ : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಜನರ ಭಾವನೆಗಳನ್ನು ಕೆರಳಿಸುವುದನ್ನು ಬಿಟ್ರೆ ಬೇರೆ ಯಾವ ಅಭಿವೃದ್ದಿ ಕೆಲಸಗಳನ್ನು ಬಿಜೆಪಿ ಸರ್ಕಾರ ಮಾಡುತ್ತಿಲ್ಲ ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಹರಿಹಾಯ್ದರು. ೪೦% ಕಮೀಷನ್ ಸರ್ಕಾರ ಈ ರಾಜ್ಯದಲ್ಲಿದೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಕಮಿಷನ್ ಬಗ್ಗೆ ಗುತ್ತಿಗೆದಾರರು ಪಿಎಂಗೆ ಪತ್ರ ಬರೆದರೂ ಪ್ರಧಾನ ಮಂತ್ರಿಗಳಿಂದ ಯಾವುದೇ ಕ್ರಮ ಆಗಿಲ್ಲ ಅಂತ ಮಾಜಿ ಸಚಿವರು ಪ್ರಶ್ನಿಸಿದರು.
ಪಿಎಂ ಮೋದಿ ತಮ್ಮ ಭಾಷಣದಲ್ಲಿ ನಾ ಕಾವೂಂಗಾ, ನಾ ಖಾನೆದುಂಗಾ ಅಂತ ಹೇಳ್ತಾರೆ. ಗುತ್ತಿಗೆದಾರರು ಸಂಘದವ್ರು ಪತ್ರ ಬರೆದರು ಪಿಎಂ ಮೌನ ಆಗಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ ಮೂಲಕ ಪ್ರಧಾನಿ ಮೋದಿಯವರೇ 40% ಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಎಂ.ಬಿ. ಪಾಟೀಲ್ ರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಕೆಲವು ದಿನಗಳ ಹಿಂದೆ ಬೆಳಗಾವಿಯ ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಸ್ನೇಹಿತರಿಗೆ ಮೆಸೆಜ್ ಮಾಡಿದ್ದಾರೆ. ನನ್ನ ಸಾವಿಗೆ ೪೦% ಕಮೀಷನ್ ಕಾರಣ ಅಂತ ಬರೆದಿದ್ದಾರೆ. ಕಮೀಷನ್ ಬಗ್ಗೆ ಕ್ರಮ ಕೈಗೊಳ್ಳದಿದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಸಂತೋಷ ಈಶ್ವರಪ್ಪಗೆ ಪತ್ರ ಬರೆದಿದ್ರು, ಆದ್ರೂ ಯಾವುದೇ ಕ್ರಮ ಆಗಿರಲಿಲ್ಲ ಸಂತೋಷ ಆತ್ಮಹತ್ಯೆ ಬಳಿಕ ವ್ಯಾಪಕ ಖಂಡನ ಬಳಿಕ ಈಶ್ವರಪ್ಪ ರಾಜೀನಾಮೆ ಕೊಟ್ರು. ಕಾಂಗ್ರೆಸ್ಸಿನದು ಈಶ್ವರಪ್ಪ ರಾಜೀನಾಮೆ ಪಡೆಯುವುದು ಆಗಿರಲಿಲ್ಲ ಎಂದರು. ಎಫ್ಐಆರ್ ಆಗುತ್ತೆ, ಇದರಲ್ಲಿ ಸೆಕ್ಷನ್ ೩೦೬ ಮಾತ್ರ ಹಾಕ್ತಾರೆ. ಭ್ರಷ್ಟಾಚಾರ, ಕಿರುಕುಳ ಅಂದ ಮೇಲೆ ಭ್ರಷ್ಟಾಚಾರ ಕಾಯ್ದೆಯಡಿ ೧೩, ೭/ಎ ಅಡಿ ಕೇಸ್ ದಾಖಲಿಸಲಿಲ್ಲ. ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಸ್ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.
ಈಶ್ವರಪ್ಪ ಅವರನ್ನು ಬಂಧಿಸಬೇಕು ಅನ್ನೋದು ಕಾಂಗ್ರೆಸ್ ನ ಬೇಡಿಕೆ. ಈ ತನಿಖೆ ಹೈಕೋರ್ಟ್ ನ ಸಿಟಿಂಗ್ ನ ಮೇಲ್ವಿಚಾರಣೆಯಲ್ಲಿ ಆಗಬೇಕು ಹೀಗಾಗಿ ನಿಷ್ಪಕ್ಷಪಾತ ತನಿಖೆಗೆ ಕಷ್ಟ ಆಗುತ್ತೆ. ಅದಕ್ಕಾಗಿ ಹೈಕೋರ್ಟ್ ಸಿಟಿಂಗ್ ಜಡ್ಜ್ ಮೇಲ್ವಿಚಾರಣೆ ತನಿಖೆ ಆಗಬೇಕು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಮೀಷನ್ ಬಗ್ಗೆ ಅನೇಕ ಸಚಿವರ ಹೆಸರು ಕೂಡಾ ಹೇಳಿದ್ದಾರೆ ಆ ಬಗ್ಗೆಯೂ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಗೋಮಾತೆ ಬಗ್ಗೆ ಹೇಳ್ತಾರೆ. ಗೋಮಾತೆಗೆ ಸರಬರಾಜು ಮಾಡುವ ಮೇವಿನಲ್ಲಿ ೪೦% ಕಮೀಷನ್ ಕೇಳ್ತಿದಾರೆ ಎಂಬುದು ಕೇಳಿಬರ್ತಿದೆ. ಕೊರೊನಾದಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಅಲ್ಲಿ ೪೦% ನಡೆದಿಲ್ಲ, ೧೦೦೦% ನಡೆದಿದೆ ಎಂದು ಆರೋಪಿಸಿದರು.
ಬೆಲೆ ಏರಿಕೆ ಎಲ್ಲರಿಗೂ ಎಫೆಕ್ಟ್ ಆಗಿದೆ ಒಂದು ಕಡೆ ಬೆಲೆ ಏರಿಕೆ ಜನ ತತ್ತರಿಸಿ ಹೋಗಿದ್ದಾರೆ. ಇನ್ನೊಂದೆಡೆ ೪೦% ಕಮೀಷನ್ ಇದು ಜನರ ಹಣವನ್ನು ಬಿಜೆಪಿ ಸರ್ಕಾರ ಲೂಟಿ ಹೊಡೆಯುತ್ತಿದೆ. ಕೋಮು ಗಲಭೆಗಳಿಂದ ರಾಜ್ಯಕ್ಕೆ ಬಂಡವಾಳ ಬರಲ್ಲ ಇರುವ ಸಂಸ್ಥೆಗಳು ರಾಜ್ಯದಿಂದ ಹೊರ ಹೋಗುತ್ತವೆ ಎಂದರು. ದಿಂಗಾಲೇಶ್ವರ ಶ್ರೀಗಳು ಹೇಳಿದಂತೆ ಮಠಗಳ ಅನುದಾನಕ್ಕೆ ೩೦% ಕಮೀಷನ್ ಕೊಡಬೇಕು. ಉಳಿದವ್ರಿಗೆ ೪೦% ಕಮೀಷನ್ ಮಠಗಳಿಗೆ ೧೦% ರಿಯಾಯಿತಿ ಇದೆ ಈ ಎಲ್ಲವೂ ಸಿಎಂ ಬೊಮ್ಮಾಯಿ ಮೂಗಿನ ಕೆಳಗಡೆಯೇ ನಡೆಯುತ್ತಿವೆ ಆದ್ರೂ ಕೂಡಾ ಇವುಗಳಿಗೆ ಕಡಿವಾಣ ಹಾಕ್ತಿಲ್ಲ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಿತ್ತೊಗೆಯಲು ಕಾಂಗ್ರೆಸ್ ಪಕ್ಷ ಜನಾಂದೋಲನ ಮಾಡ್ತಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಬಾಗಲಕೋಟೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.