Breaking News

ದಾಖಲೆ ಕೇಳಿದ ಸಚಿವರಿಗೆ ದಿಂಗಾಲೇಶ್ವರ ಶ್ರೀ ತಿರುಗೇಟು

Spread the love

ಗದಗ : ‘ಮಠ, ಮಂದಿರಗಳಿಗೆ ದೇಣಿಗೆ ನೀಡಿದರೆ ಅಲ್ಲಿ ರಶೀದಿ ಕೊಡುತ್ತಾರೆ. ಆದರೆ, ಲಂಚ ಪಡೆದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ದೇಣಿಗೆ ಪಾವತಿ ನೀಡುತ್ತಾರೆಯೇ?’ ಎಂದು ಲಂಚದ ಬಗ್ಗೆ ದಾಖಲೆ ಕೇಳಿದ ಸಚಿವರಿಗೆ ಫಕೀರ ದಿಂಗಾಲೇಶ್ವರ ಶ್ರೀ ತಿರುಗೇಟು ನೀಡಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠದಲ್ಲಿ ಮಂಗಳವಾರ ಅವರು ಮಾತನಾಡಿ, ‘ಮಠಕ್ಕೆ ಮಂಜೂರಾದ ₹75 ಲಕ್ಷ ಅನುದಾನದಲ್ಲಿ ಅಧಿಕಾರಿಗಳು ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕಿಂತ ಹೆಚ್ಚಿನ ದಾಖಲೆಯ ಅವಶ್ಯಕತೆ ಇದೆಯೇ? ರಾಜ್ಯದಲ್ಲಿ ಮುಜರಾಯಿ ಇಲಾಖೆ ಹೊರತುಪಡಿಸಿದರೆ ಎಲ್ಲಾ ಇಲಾಖೆಗಳಲ್ಲಿ ಅನುದಾನ ತೆಗೆದುಕೊಳ್ಳಲು ಎಲ್ಲ ಮಠಾಧೀಶರು ಕಮಿಷನ್ ನೀಡಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮುಂದಾಗುತ್ತಿಲ್ಲ. ಅವರನ್ನೆಲ್ಲಾ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ’ ಎಂದು ಹೇಳಿದರು.


Spread the love

About gcsteam

    Check Also

    ಸಿದ್ದರಾಮಯ್ಯಾನಂತಹ ಸೂಗಲಾಡಿ ಇನ್ನೊಬ್ಬರು ಇಲ್ಲ; ನಾರಾಯಣಸ್ವಾಮಿ

    Spread the loveಹುಬ್ಬಳ್ಳಿ; ಮುಖ್ಯಮಂತ್ರಿ ಸಿದ್ದರಾಮಯ್ಯಾ ಸಿದ್ದರಾಮಯ್ಯ ನಂತಹ ಸೂಗಲಾಡಿ ಇನ್ನೊಬ್ಬರು ಇಲ್ಲ ಎಂದು ಬಿಜೆಪಿ ಎಸ್ಸಿ ರಾಜ್ಯಾಧ್ಯಕ್ಷ, ಎಂಎಲ್ …

    Leave a Reply