ಶಾಂತಿ ಕಾಪಾಡಿ ಭಾವೈಕ್ಯತೆ ಸಾರುವಂತೆ ಮಹಾನಗರ ಜನತೆಗೆ ಶ್ರೀ ಗಳ ಕರೆ

Spread the love

ಹುಬ್ಬಳ್ಳಿ : ಹಳೇಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹುಬ್ಬಳ್ಳಿ ಕೇಶ್ವಾಪುರ ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ನಾಗೇಶ್ ಕಾಡದೇವರಮಠ ತೀವ್ರವಾಗಿ ಗಾಯಗೊಂಡಿದ್ದು ಅವರ ಮನೆಗೆ ಮೂರುಸಾವಿರ ಮಠದ ಜಗದ್ಗುರು ಶ್ರೀ ಮ ನಿ ಪ್ರ ಗುರುಸಿಧ್ಧ ರಾಜಯೋಗಿಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಹಾಗೂ ಅಲ್ಪಸಂಖ್ಯಾತ ಮುಖಂಡರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. CPI ಕಾಡದೇವರಮಠರವರಿಗೆ ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಅವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರವರ ದೂರದೃಷ್ಟಿಯುಳ್ಳ ಕಾರ್ಯ ಚಟುವಟಿಕೆಯನ್ನು ಮುಕ್ತವಾಗಿ ಶ್ಲಾಘಿಸಿದರು. ಮಹಾನಗರ ಜನತೆ ಶಾಂತಿ ಕಾಪಾಡಿಕೊಂಡು ಭಾವೈಕ್ಯತೆಯನ್ನು ಸಾರಬೇಕೆಂದು ಕರೆ ನೀಡಿದರು.
ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಬಾಬಾಜಾನ್ ಮುಧೋಳ, ಸುರೇಶ್ ಸವಣೂರು, ಫಾರೂಖ ಅಬ್ಬುನವರ, ಪ್ರಕಾಶಗೌಡ ಪಾಟೀಲ್, ಡಿಸಿಸಿ ಪ್ರ- ಕಾರ್ಯದರ್ಶಿ,ರಾಜು ಪಾಟೀಲ್, ಅಪ್ಪಣ್ಣ ಕಮ್ಮಾರ, ಬಸವರಾಜ ಜಡಿಮಠ, ಮಹಾಂತೇಶ ಹಿರೇಮಠ, ಗಿರೀಶ್, ಮಲ್ಲಿಕಾರ್ಜುನ, ಅವರನ್ನು ಒಳಗೊಂಡ ನಿಯೋಗ ಭೇಟಿ ಮಾಡಿದರು.


Spread the love

About gcsteam

    Check Also

    10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ಗದ್ಯ ಪಾಠ ಕೈಬಿಟ್ಟಿಲ್ಲ

    Spread the loveಬೆಂಗಳೂರು: 10ನೇ ತರಗತಿ ಪಠ್ಯದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಪಾಠ ಕೈಬಿಡಲಾಗಿದೆ ಎಂಬ ಊಹಾಪೋಹಕ್ಕೆ …

    Leave a Reply