Breaking News

ಸಂಗೀತ ಕ್ಷೇತ್ರದ ಮಹಾನ ದಿಗ್ಗಜ ಇನ್ನಿಲ್ಲ

Spread the love

ಭುವನೇಶ್ವರ : ಒಡಿಯಾ ಭಾಷೆಯ ಖ್ಯಾತ ಸಂಗೀತಗಾರ ಮತ್ತು ಗಾಯಕರಾದ ಪ್ರಫುಲ್ಲ ಕರ್ (83) ನಿಧನರಾಗಿದ್ದಾರೆ. ಭುವನೇಶ್ವರದ ಸತ್ಯನಗರ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಕರ್‌ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಗೀತರಚನೆಗಾರ, ಸಂಗೀತಗಾರ, ಗಾಯಕರಾಗಿ ಪ್ರಫುಲ್ಲ ಕರ್ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಮಹಾನ್‌ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಅವರು ಒಡಿಯಾ ಭಾಷೆಯಲ್ಲಿ ಪ್ರಮುಖವಾಗಿ ಸಂಗೀತ ರಚನೆಗಳನ್ನು ಮಾಡಿದರೂ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಸಂಗೀತ ಕ್ಷೇತ್ರದಲ್ಲಿ ತಮ್ಮ ಅದ್ವಿತೀಯ ಸಾಧನೆಗಳಿಗಾಗಿ 2015 ರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದರು.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!