ಹುಬ್ಬಳ್ಳಿ; ತಾಲೂಕಿನ ಶಿರಗುಪ್ಪಿಯ
ನಾಯ್ಕರ ಶಿಕ್ಷಣ ಸಂಸ್ಥೆಯ ಮಾಲತೇಶ ಸ್ವತಂತ್ರ್ಯ ಪದವಿ ಪೂರ್ವ ಮಹಾವಿದ್ಯಾಲಯ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಕ್ರೀಡೆಗೆ ವಿಶೇಷ ಒತ್ತು ನೀಡುತ್ತಿದೆ ಎಂದು ನಾಯ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಎಸ್.ಎಸ್.ಅಣ್ಣಿಗೇರಿ ಅಭಿಪ್ರಾಯಪಟ್ಟರು.
ಪಂಡಿತ ನೆಹರು ಹೈಸ್ಕೂಲಿನ 16 ವರ್ಷ ಒಳಗಿನ ಜಿಲ್ಲಾ ಮಟ್ಟದ ಖೋ – ಖೋ ತಂಡಕ್ಕೆ ಆಯ್ಕೆಯಾದ ಗಂಡು ಮತ್ತು ಹೆಣ್ಣು ಮಕ್ಕಳ ತಂಡಕ್ಕೆ ಕ್ರೀಡಾ ಪರಿಕರಗಳನ್ನು ದೇಣಿಗೆಯಾಗಿ ನೀಡುವ ಸಮಾರಂಭ ದಲ್ಲಿ ಮಾತನಾಡಿದ ಅವರು,
ನಾಯ್ಕರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಸಿ .ಎನ್. ನಾಯ್ಕರವರು ಮಕ್ಕಳಿಗೆ ಶೈಕ್ಷಣಿಕ ಸಾಧನೆಗೆ ಕ್ರೀಡೆ ಅತ್ಯಂತ ಅವಶ್ಯಕ ಕ್ರೀಡೆಯು ಭೌತಿಕ ಅಭಿವೃದ್ಧಿಯ ಸಾಧನೆ ಜೊತೆಗೆ ಮನಸ್ಸನ್ನು ಹದಗೊಳಿಸಿ ಶೈಕ್ಷಣಿಕ ವಿಷಯಗಳನ್ನು ಮನವರಿಕೆ ಮಾಡಿಕೊಳ್ಳಲು ಸಹಾಯಕಾರಿದೆ ಎಂದರು. ಈ ಸಂದರ್ಭದಲ್ಲಿ ಪ್ರಾಚಾರ್ಯರು ಆರ್.ಎಮ್.ಇಂಗಳೆ ,ತಂಡದ ಕೋಚ್ ರಾಜು. ಎಮ್.ಇಂಗಳೆ, ಶ್ರಿಧೇವಿ ನಾಯ್ಕರ, ಮಹಾವಿದ್ಯಾಲಯ ಸಿಬ್ಬಂದಿ ವರ್ಗ ಹಾಗೂ ಅನೇಕ ಕ್ರೀಡಾಪಟುಗಳು ಭಾಗವಹಿಸಿದ್ದರು.
