Breaking News

ಅವಳಿನಗರದ ಕೆಲವು ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಸಾರ್ವಜನಿಕರು ಜಾಗೃತೆಯಿಂದ ಇರಲು ಪಾಲಿಕೆ ಆಯುಕ್ತರ ಮನವಿ

Spread the love

ಹುಬ್ಬಳ್ಳಿ- ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆಯ ಕೆಲವು ವಾರ್ಡ್‍ಗಳ ವ್ಯಾಪ್ತಿಯ ನಗರಗಳಲ್ಲಿ ಪರಿಶೀಲಿಸಲಾಗಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿ ಇರುವುದು ಕಂಡು ಬಂದಿದೆ. ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಪೆÇೀಲಿಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗಳು ಸತತವಾಗಿ ಶ್ರಮಿಸುತ್ತಿದ್ದಾರೆ.
ಅವಳಿನಗರದ ಪ್ರತಿ ವಾರ್ಡ್‍ನಲ್ಲಿ ಪ್ರತಿಯೊಬ್ಬರು ತಪ್ಪದೇ ಮಾಸ್ಕ್ ಧಾರಣೆ, ಸ್ಯಾನಿಟೈಜರ್ ಬಳಕೆ ಮತ್ತು ಪರಸ್ಪರ ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಆದರೂ ಮಹಾನಗರದ ಕೆಲವು ವಾರ್ಡ್‍ಗಳ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವಳಿ ನಗರದಲ್ಲಿ ಅತಿ ಹೆಚ್ಚು ಕೋವಿಡ್-19 ಸೋಂಕಿತರಿರುವ ಪ್ರದೇಶಗಳು : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜೂನ್ 7ರ ವರೆಗೆ, ವಲಯ 6 ರ ವಾರ್ಡ್ ನಂ: 48 ಚೇತನಾ ಕಾಲೋನಿ, ಗದಗ ರಸ್ತೆ ಹುಬ್ಬಳ್ಳಿ – 125 ಪ್ರಕರಣಗಳು, ವಲಯ 1 ರ ವಾರ್ಡ್ ನಂ: 1 ಬಸವ ನಗರ, ಕೆಲಗೇರಿ ಧಾರವಾಡ – 103 ಪ್ರಕರಣಗಳು, ವಲಯ 4 ರ ವಾರ್ಡ್ ನಂ: 23 ನವನಗರ, ಇ.ಡಬ್ಲ್ಯೂ.ಎಸ್,. ಎಲ್.ಐ.ಜಿ., ಕೆ.ಎಚ್.ಬಿ ಕಾಲೋನಿ ಹುಬ್ಬಳ್ಳಿ – 102 ಪ್ರಕರಣಗಳು, ವಲಯ 7 ರ ವಾರ್ಡ್ ನಂ: 36 ರೇಣುಕಾ ನಗರ, ರವಿ ನಗರ, ಗೋಕುಲ್ ರೋಡ್ ಹುಬ್ಬಳ್ಳಿ- 99 ಪ್ರಕರಣಗಳು , ವಲಯ 5 ವಾರ್ಡ್ ನಂ: 35 ವಿದ್ಯಾನಗರ, ಜಯನಗರ ಹುಬ್ಬಳ್ಳಿ – 97 ಪ್ರಕರಣಗಳು, ವಲಯ 12 ರ ವಾರ್ಡ್ ನಂ: 22 ರಾಜೀವಗಾಂಧಿ ನಗರ, ಎಸ್.ಡಿ.ಎಮ್ ಮೆಡಿಕಲ್ ಕಾಲೇಜ ಧಾರವಾಡ – 73 ಪ್ರಕರಣಗಳು, ವಲಯ 12 ರ ವಾರ್ಡ್ ನಂ: 19 ವಿದ್ಯಾಗಿರಿ, ಗಾಂಧಿ ನಗರ ಧಾರವಾಡ -72 ಪ್ರಕರಣಗಳು, ವಲಯ 6 ರ ವಾರ್ಡ್ ನಂ : 30 ದಯಾನಂದ ಕಾಲೋನಿ, ಹಳೇ ಬಾದಾಮಿ ನಗರ ಹುಬ್ಬಳ್ಳಿ – 71 ಪ್ರಕರಣಗಳು , ವಲಯ 7 ರ ವಾರ್ಡ್ ನಂ: 40 ಬಸವಾ ನಗರ, ಗುಡಿ ಪ್ಲಾಟ್ ಹುಬ್ಬಳ್ಳಿ – 71 ಪ್ರಕರಣಗಳು, ವಲಯ 3 ರ ವಾರ್ಡ್ ನಂ: 3 ಸಂಪಿಗೆ ನಗರ, ಕುಮಾರೇಶ್ವರ ನಗರ ಧಾರವಾಡ – 64 ಪ್ರಕರಣಗಳು, ವಲಯ 7 ರ ವಾರ್ಡ್ ನಂ: 39 ಆನಂದ ನಗರ ರಸ್ತೆ, ವಿಶಾಲ ನಗರ ಸಿದ್ಧಾರೋಡ ಮಠ ಹುಬ್ಬಳ್ಳಿ – 63 ಪ್ರಕರಣಗಳು, ವಲಯ 5 ರ ವಾರ್ಡ್ ನಂ: 28 ಅಶೋಕ ನಗರ, ರಾಜ ನಗರ , ಚಾಮುಂಡೇಶ್ವರಿ ನಗರ ಹುಬ್ಬಳ್ಳಿ -59 ಪ್ರಕರಣಗಳು, ವಲಯ 1 ರ ವಾರ್ಡ್ ನಂ: 2 ನಾರಾಯಣಪೂರ, ಫ್ಪಾರೇಸ್ಟ್ ಕಾಲೋನಿ ಧಾರವಾಡ – 55 ಪ್ರಕರಣಗಳು , ವಲಯ 7 ರ ವಾರ್ಡ್ ನಂ: 37 ರಾಮಲಿಂಗೇಶ್ವರ ನಗರ ಹುಬ್ಬಳ್ಳಿ- 54 ಪ್ರಕರಣಗಳು, ವಲಯ 1 ರ ವಾರ್ಡ್ ನಂ: 17 ಸಿ.ಬಿ.ನಗರ, ಕಲ್ಯಾಣ ನಗರ, ಶಿವಗಿರಿ ಧಾರವಾಡ – 47 ಪ್ರಕರಣಗಳು, ವಲಯ 6 ರ ವಾರ್ಡ್ ನಂ: 31 ಕೇಶ್ವಾಪೂರ, ಶಬರಿ ನಗರ ಹುಬ್ಬಳ್ಳಿ- 47 ಪ್ರಕರಣಗಳು, ವಲಯ 3 ರ ವಾರ್ಡ್ ನಂ: 12 ಮರಾಠಾ ಕಾಲೋನಿ ಧಾರವಾಡ – 41 ಪ್ರಕರಣಗಳು, ವಲಯ 4 ರ ವಾರ್ಡ್ ನಂ: 24 ಅಧ್ಯಾಪಕ ನಗರ ಹುಬ್ಬಳ್ಳಿ -41 ಪ್ರಕರಣಗಳು, ವಲಯ 12 ರ ವಾರ್ಡ್ ನಂ 20: ವ್ಹಾಯ್.ಎಸ್.ಕಾಲೋನಿ, ಲಕ್ಷ್ಮೀ ನಗರ ಧಾರವಾಡ – 41 ಪ್ರಕರಣಗಳು, ವಲಯ 10 ರ ವಾರ್ಡ್ ನಂ : 41 ಹೆಗ್ಗೇರಿ ಕಾಲೋನಿ, ಬಸವ ನಗರ ಹುಬ್ಬಳ್ಳಿ – 40 ಪ್ರಕರಣಗಳು ದಾಖಲಾಗಿವೆ.
ಒಟ್ಟು ಅವಳಿನಗರದ ಸುಮಾರು 9 ವಲಯ ವ್ಯಾಪ್ತಿಯ 20 ವಾರ್ಡ್‍ಗಳ 42 ಪ್ರದೇಶಗಳಲ್ಲಿ 1365 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಇದೇ ರೀತಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾದರೆ ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತದೆ. ಸಾರ್ವಜನಿಕರು ಕೋವಿಡ ಮಾರ್ಗಸೂಚಿಗಳನ್ನು ಪಾಲಿಸಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಬೇಕೆಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಹೆಣ್ಣು ಮಕ್ಕಳೇ ಸ್ಟಾಂಗು ಗುರು ಕಾರ್ಯಕ್ರಮ ಸ್ಟಾರ್ ಸುವರ್ಣ ಚಾಲನೆ

Spread the loveಹುಬ್ಬಳ್ಳಿ: ನಗರದ ವಿನೂತನ ಪೌಂಡೇಶನ್ ಹುಬ್ಬಳ್ಳಿ ಅಧ್ಯಕ್ಷರು ಅಕ್ಕಮ್ಮಾ ಕಂಬಳಿ ಮುಂತಾದವರ ನೇತೃತ್ವದಲ್ಲಿ ಹೆಣ್ಣು ಮಕ್ಕಳೇ ಸ್ಟಾಂಗು …

Leave a Reply

error: Content is protected !!