ಹಳೆ ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ

Spread the love

ಹುಬ್ಬಳ್ಳಿ; ಹಳೆ ಹುಬ್ಬಳ್ಳಿಯ ಒಂದು ಕೋಮಿನ ಪ್ರಾರ್ಥನಾ ಮಂದಿರದ ಮೇಲೆ ಕೇಸರಿ ಧ್ವಜ ಹಾರಾಟ ಮಾಡುವ ಧ್ವಜದ ವಿಡಿಯೋವೊಂದು ವೈರಲ್ ಆದ ಪ್ರಯುಕ್ತ ಭಾರೀ ಗಲಾಟೆಯಾದ ಪ್ರಕರಣ ತಡೆರಾತ್ರಿ ನಡೆದಿದೆ.
ಕಲ್ಲು ತೂರಾಟ ಮಾಡಿದ ಕಾರಣ
ಪೊಲೀಸ್ ಇನ್ಸ್‌ಪೆಕ್ಟರ್ ಕಾಡದೇವರಮಠ ಹಾಗೂ ಕಾನ್ಸ್‌ಟೇಬಲ್ ಗುರುಪಾದಪ್ಪ ಸ್ವಾದಿ ಗಾಯಗೊಂಡಿದ್ದಾರೆ. ದಿಡ್ಡಿ ಓಣಿಯಲ್ಲಿ ಪೊಲೀಸರ ಕಾರು ಮೇಲೆ ದುಷ್ಕರ್ಮಿಗಳು ಕಲ್ಲು ತೋರಾಟ ಮಾಡಿದ್ದು
ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ, ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸಹ ಸಣ್ಣ ಪುಟ್ಟ ಗಾಯವಾಗಿದೆ. ಪೊಲೀಸರು ಹುಬ್ಬಳ್ಳಿ- ಕಾರವಾರ ರಸ್ತೆ ಬಂದ್ ಮಾಡಿದ್ದಾರೆ.
ಘಟನೆಯಲ್ಲಿ ಮೂರು ಪೊಲೀಸ್ ಜೀಪ್ ಗಳು ಜಖಂಗೊಂಡಿವೆ. ಠಾಣೆ ಬಳಿ ಜನರನ್ನು ಪೊಲೀಸರು ಚದುರಿಸಿದ್ದಾರೆ. ಆದರೂ ಜನ ಅಲ್ಲಲ್ಲಿ ಗುಂಪು ಸೇರಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ.
ಪೊಲೀಸ್ ಆಯುಕ್ತ ಲಾಭೂರಾಮ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ.


Spread the love

Leave a Reply

error: Content is protected !!