Breaking News

ಭಾರೀ ಮಳೆ: ​ಸಿಡಿಲು ಬಡಿದು ಮೂವರು ಸಾವು

Spread the love

ಗದಗ: ಜಿಲ್ಲೆಯ ವಿವಿಧೆಡೆ ಸುರಿದ ಭಾರೀ ಗುಡುಗು ಸಿಡಿಲು ಸಹಿತ ಮಳೆಗೆ ಮೂವರು ಮೃತಪಟ್ಟಿದ್ದಾರೆ.
ಶಿರಹಟ್ಟಿ ತಾಲ್ಲೂಕಿನ ಹರಿಪುರ ಹೊರವಲಯದಲ್ಲಿ ಮಾವಿನ ತೋಟ ಕಾಯುತ್ತಿದ್ದ ಮಾಬುಸಾಬ ದೊಡ್ಡಮನಿ (55) ಹಾಗೂ ದನ ಮೇಯಿಸಲು ಹೋಗಿದ್ದ ಹರಿಪುರದ ನಿವಾಸಿ ಮುರಗೇಶ ಹೊಸಮನಿ (40) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಮುಂಡರಗಿ ತಾಲ್ಲೂಕಿನ ಡಂಬಳ ಹೋಬಳಿ ಹಳ್ಳಿಕೇರಿ ಗ್ರಾಮದ ‌ಹನುಮಪ್ಪ ಸಿದ್ದಪ ಮನ್ನಾಪುರ (22) ವೆಂಕಟಾಪುರದಲ್ಲಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಲಕ್ಷ್ಮೇಶ್ವರ ತಾಲ್ಲೂಕಿನ ಸುತ್ತಮುತ್ತ ಆಲಿಕಲ್ಲು ಮಳೆ ಸುರಿಯಿತು. ಗದಗ ಬೆಟಗೇರಿ ಅವಳಿ ನಗರದಲ್ಲಿ ಗುಡುಗು ಸಹಿತ ತುಂತುರು ಮಳೆ ಸುರಿಯಿತು.


Spread the love

About gcsteam

    Check Also

    ಪಾಕಿಸ್ತಾನ ಜಿಂದಾಬಾದ್ ಅಂತಾ ಎಷ್ಟು ಸಲ ಕೂಗಲಾಗಿದೆ, ಎಷ್ಟು ಜನರನ್ನ ಬಂಧನ ಮಾಡಲಾಗಿದೆ- ಸಚಿವ ಲಾಡ್

    Spread the loveಹುಬ್ಬಳ್ಳಿ; ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಯಾರೇ ತಪ್ಪು ಮಾಡಲಿ ಕ್ರಮ …

    Leave a Reply