Breaking News

ರಾಮಧೂತನ ಜಯಂತಿ ದಿನವೇ ಅದ್ಭುತ ಪವಾಡ

Spread the love

ಹುಬ್ಬಳ್ಳಿ : ಇಂದು ದೇಶಾದ್ಯಂತ ಶ್ರೀ ರಾಮನ ಪರಮ ಭಕ್ತ ಹನುಮಂತನ ಜಯಂತಿ ಜೋರಾಗಿ ನಡೆಯುತ್ತಿದೆ. ಇದೇ ದಿನ ಆಂಜನೇಯನ ದೇವಸ್ಥಾನದಲ್ಲಿ ಅದ್ಭುತ ಪವಾಡವೊಂದು ನಡೆದಿದೆ. ಆಂಜನೇಯನ ನೇತ್ರದಿಂದ ಆನಂದ ಭಾಷ್ಪ ಸುರಿದಿದೆ. ಹುಬ್ಬಳ್ಳಿ ತಾಲ್ಲೂಕಿನ ಬುಡರಸಿಂಗಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಈ ಅದ್ಭುತ ಪವಾಡ ನಡೆದಿದೆ.
ಶ್ರೀ ಹನುಮಾನ್ ಜಯಂತಿ ಅಂಗವಾಗಿ ಇಂದು ಬುಡರಸಿಂಗಿ ದೇವಸ್ಥಾನದಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತಿರುವ ವೇಳೆ ಆಂಜನೇಯನ ಕಣ್ಣಿನಿಂದ ಆನಂದ ಬಾಷ್ಪ ಬಂದಿದೆ. ಆಂಜನೇಯ ಕಣ್ಣಿನಿಂದ ಸುರಿದ ಆನಂದ ಭಾಷ್ಪದಿ‌ಂದ ಭಕ್ತರು ಆಶ್ಚರ್ಯಗೊಂಡಿದ್ದಾರೆ. ಇನ್ನೂ ಈ ರಾಮಧೂತನ ದರ್ಶನ ಪಡೆಯಲು ಭಕ್ತರು ಹಾತೊರೆಯುತ್ತಿದ್ದಾರೆ.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸಾರಾ ಬೈಕ್ ರೆಂಟಲ್ ಆರಂಭ

Spread the love*ಹುಬ್ಬಳ್ಳಿ:* ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸಾರಾ ಬೈಕ್ ರೆಂಟಲ್ ಆರಂಭಗೊಂಡಿದ್ದು ಪ್ರವಾಸಿಗರು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು …

Leave a Reply

error: Content is protected !!