ಸಂತೋಷ್ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಮಹಾನಾಯಕನ ಕೈವಾಡ- ರಮೇಶ್ ಜಾರಕಿಹೊಳಿ

Spread the love

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ‌ಹಿಂದೆ ನನ್ನ ಸಿಡಿ ತಯಾರಿಸಿದ್ದ ಮಹಾನಾಯಕನ ಕೈವಾಡವಿದೆ ಎಂದು ಮಾಜಿ ಸಚಿವ ರಮೇಶ್ ‌ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ತಾಲೂಕಿನ ಬಡಸ್ ಗ್ರಾಮದ ಸಂತೋಷ್ ಪಾಟೀಲ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿಕೆಶಿವಕುಮಾರ ಹೆಸರು ಹೇಳದೇ ಆರೋಪಿಸುತ್ತಾ, ನನ್ನ ಬಳಿ‌ ದಾಖಲೆಗಳಿವೆ. ಇದನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ. ನಮ್ಮ ನಾಯಕರು ಅನುಮತಿ ನೀಡಿದರೆ ಸೋಮವಾರ ಸುದ್ದಿಗೋಷ್ಟಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬಾರದು. ನನ್ನ ಹಾಗು ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ರಮೇಶ್‌ ಜಾರಿಕಿಹೊಳಿ ಆಗ್ರಹಿಸಿದರು.ಇದಕ್ಕೂ ಮೊದಲು ಬಡಸ್ ಗ್ರಾಮದಲ್ಲಿ ಸಂತೋಷ್ ಪಾಟೀಲ್ ಅವರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಹೂವಿನ ಹಾರ ಅರ್ಪಿಸಿದರು.ಈ ನಡುವೆ ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ನನ್ನ ಮೇಲೆ ಏನೆಲ್ಲಾ ಆರೋಪ ಮಾಡಲಿ ಮೊದಲು ಈಶ್ವರಪ್ಪನನ್ನ ಬಂಧಿಸಲಿ. ಮುಖ್ಯಮಂತ್ರಿ ಎಂಥಂಥವರನ್ನು ಇರಿಸಿಕೊಂಡಿದ್ದಾರೆ ಗೊತ್ತಲ್ಲಾ ಎಂದು ಕಿಡಿ ಕಾರಿದರು.


Spread the love

Leave a Reply

error: Content is protected !!