ಬಾಗಲಕೋಟೆ : ಮಾಜಿ ಸಚಿವ ಎಸ್ ಆರ್ ಪಾಟೀಲ್ ನೃತೃತ್ವದ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ರ್ಯಾಲಿ ಇಂದು ಸಂಜೆ ಕಾತರಕಿ ಗ್ರಾಮಕ್ಕೆ ಆಗಮಿಸುವ ಮೂಲಕ ಬಾಗಲಕೋಟೆ ಜಿಲ್ಲೆಗೆ ಎಂಟ್ರಿ ಕೊಟ್ಟಿದೆ. ಕೃಷ್ಣೆ ಮಹದಾಯಿ, ನವಲಿ ಯೋಜನೆಗ ಅನುಷ್ಠಾನಕ್ಕೆ ಆಗ್ರಹಿಸಿ ಗದಗ ಜಿಲ್ಲೆಯ ನರಗುಂದದಿಂದ ಆರಂಭವಾಗಿರುವ ಈ ಟ್ರಾಕ್ಟರ್ ರ್ಯಾಲಿ ಐದು ದಿನಗಳ ಕಾಲ, ಗದಗ ಬಾಗಲಕೋಟೆ, ವಿಜಯಪುರ ಭಾಗದಲ್ಲಿ ಸಂಚಿರಿಸಲಿದೆ. ಇದೇ ಸಮಯದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಸ್.ಆರ್ ಪಾಟೀಲ್ ಟ್ರ್ಯಾಕ್ಟರ್ ರ್ಯಾಲಿಗೆ ಅಭೂತಪೂರ್ವ ಸ್ಪಂಸನೆ ಸಿಕ್ಕಿದೆ. ಜನ ಪ್ರಾದೇಶಿಕ ಅಸಮಾನತೆಯ ವಿರುದ್ಧ ಅಸಮಾಧಾನ ಗೊಂಡಿದ್ದಾರೆ, ಯಾರಿಗೆ ಉತ್ತರ ಕರ್ನಾಟಕದ ಕಾಳಜಿ ಇದೆ ಅವರು ಈ ಯಾತ್ರೆಗೆ ಬಂದಿದ್ದಾರೆ ಎನ್ನುವ ಮೂಲಕ ಸ್ವಪಕ್ಷದ ರಾಜ್ಯ ನಾಯಕರಿಗೆ ಮಾತಿನ ಚಾಟಿ ಏಟು ಬೀಸಿದ್ರು. ಅಲ್ಲದೇ ಈ ಯೋಜನೆಗಳು ಅನುಷ್ಠಾನಗೊಳ್ಳದಿದ್ರೆ ಪ್ರಾದೇಶಿಕ ಅಸಮಾನತೆ ಉಂಟಾಗಿ, ಪ್ರತ್ಯೇಕ ರಾಜ್ಯದ ಕೂಗು ಏಳಬಹುದು ಹಾಗಾಗುವದು ಬೇಡ ಎಂದ್ರು. ಇನ್ನು ಸಚಿವ ಈಶ್ವರಪ್ಪ ರಾಜಿನಾಮೆ ಪ್ರಕರಣಕ್ಕೆ ಪ್ರತಿಕ್ರಯಿಸಿ, ನಮ್ಮ ಸ್ಥಿತಿ ಎಲ್ಲಿಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸುವ ಜೊತೆಗೆ, ಪರ್ಸಂಟೇಜ್ ಹಾವಳಿ ಇಂದ ಈಗಿನ ಕಾಮಗಾರಿಗಳು ಗುಣಮಟ್ಟ ಕಳೆದುಕೊಂಡಿವೆ. ಈ ಬಗ್ಗೆ ತನಿಖೆಯಾಗಿ, ತಪ್ಪಿತಸ್ತರಾಗಿದ್ರೆ ಅವರ ಮೇಲೆ ಕ್ರಮ ಆಗಲಿ ಎಂದ್ರು. ರಾಜ್ಯ ನಾಯಕರು ರ್ಯಾಲಿಗೆ ಬರದಿರೋದಕ್ಕೆ, ನಾನು ಯಾರಿಗೂ ಆಮಂತ್ರಣ ಕೊಟ್ಟಿಲ್ಲ, ನಮ್ಮ ಭಾಗದ ಜನ್ರ ಬಗ್ಗೆ ಕಾಳಜಿ ಇದ್ದವರು ಯಾತ್ರೆಗೆ ಬಂದರೆ ಸ್ವಾಗತಿಸ್ತೇನೆ ಎಂದ್ರಲ್ಲದೇ, ರ್ಯಾಲಿಯ ನಂತ್ರ ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಸಂಚರಿಸಿ, ಜನ್ರ ಭಾವನೆಯನ್ನ ಅರ್ಥಮಾಡಿಕೊಳ್ಳಲು ಶ್ರಮಿಸ್ತೇನೆ ಎಂದರು. ನೂರಾರು ಟ್ರ್ಯಾಕ್ಟರ್ ಗಳು ರ್ಯಾಲಿಯಲ್ಲಿ ಭಾಗವಹಿಸಿದ್ದವು.
