ಹುಬ್ಬಳ್ಳಿ ; ತಾಲೂಕಿನ ಛಬ್ಬಿ ಗ್ರಾಮದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮ ನಿಮಿತ್ಯ ಲಕ್ಕಿ ಆಪ್ಟಿಕಲ್ ಹುಬ್ಬಳ್ಳಿ ಅವರಿಂದ ಉಚಿತ ನೇತ್ರ ಪಾಸಣೆ ಮಾಡಲಾಯಿತು. ಕಾರ್ಯಕ್ರಮವನ್ನು ಗ್ರಾಮದ ಮುಖಂಡ ದೇವೇಂದ್ರಪ್ಪ ಕಾಗೆನವರ್ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಲಕ್ಕಿ ಆಪ್ಟಿಕಲ್ಸ್ ಮಾಲೀಕರಾದ ಮಹಾವೀರ ಜೈನ್ ರನ್ನು ಛಬ್ಬಿ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು . ಮುಖಂಡರಾದ ನೇಮಿಚಂದ್ರ ಬಸಾಪುರ, ಲಕ್ಷ್ಮಣ್ ನಾಯ್ಕರ್, ಉಷಾ ಇಂಡಿ, ಸುಧಾ ಕಾಗೆನವರ, ವಿವಿಧ ಸಮಾಜದ ಪ್ರಮುಖರು, ಹಿರಿಯರು ಮುಂತಾದವರು ಉಪಸ್ಥಿತರಿದ್ದರು. ನಿಂಗಪ್ಪ ನಾಯ್ಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ನಂತರ ಗ್ರಾಮದ ಮುಖಂಡ ದೇವೇಂದ್ರಪ್ಪ ಕಾಗೇನವರ ಮಾತನಾಡಿ, ಮನುಷ್ಯನಿಗೆ ದೇಹದ ಎಲ್ಲ ಅಂಗಾಂಗಗಳಕ್ಕಿಂತ ಕಣ್ಣು ಬಹಳ ಮಹತ್ವದ್ದು ಇರುತ್ತದೆ. ಕಾರಣ ಇವರು ನಿಮ್ಮ ಕಣ್ಣನ್ನು ತಪಾಸಣೆ ಮಾಡಿ ಕನ್ನಡಕವನ್ನು ನೀಡುತ್ತಾರೆ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
