ಬಾಗಲಕೋಟೆ : ದೇಶದಲ್ಲೇ ಹೊಸ ಸಂಚಲನ ಸೃಷ್ಟಿಸಿರುವ ಆಪ್ ಪಕ್ಷದ ಸದಸ್ಯತ್ವ ಅಭಿಯಾನ ಶುರುವಾಗಲಿದೆ. ಮೋದಿ ಅಲೆಯಲ್ಲೂ ಪಂಜಾಬ್ ಸೇರಿದಂತೆ ದೇಶದ ಎರಡು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಕ್ಷದ ಅಲೆ ಜೋರಾಗಿದೆ. ಈ ಕುರಿತು ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೂತನ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ, ನಮ್ಮ ಮೊದಲ ಆದ್ಯತೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದರು. ಇನ್ನೂ, ಏಪ್ರಿಲ್ 14 ರಿಂದ ಆಪ್ ಪಕ್ಷದ ಸದಸ್ಯತ್ವ ಅಭಿಯಾನ ಶುರುವಾಗಲಿದೆ ಎಂದರು.
