https://youtu.be/cM2v-K_WhKk
ಹುಬ್ಬಳ್ಳಿ: ಪ್ರಬುದ್ಧ ರಾಜಕಾರಣಿಯಾಗಿ ಯಡಿಯೂರಪ್ಪ ಏನು ಸಂದೇಶ ನೀಡಬೇಕು ಅದ್ನ ನೀಡಿದ್ದಾರೆ. ಮುತ್ಸದಿ ರಾಜಕಾರಣಿಗೆ ಇರೋ ಬದ್ಧತೆ ಯಡಿಯೂರಪ್ಪ ಗೆ ಇದೆ ಎಂದು ಮೂರುಸಾವಿರ ಮಠದ ಮಠಾಧೀಶ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳ ಹೇಳಿದರು.
ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡ್ತೇನೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು.ಯಡಿಯೂರಪ್ಪ ಹೇಳಿಕೆ ತುಂಬಾ ಬೆಲೆಯುಳ್ಳ ಮಾತು.
ಅವರ ಮಾತಿನಿಂದ ರಾಜಕಾರಣಿ ಹೇಗಿರಬೇಕೆಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು.ಯಡಿಯೂರಪ್ಪ ಒಬ್ಬ ಒಳ್ಳೆ ರಾಜಕಾರಣಿ. ಕರ್ನಾಟಕದ ಸೇವೆ ಮಾಡೊ ಸಜ್ಜನ ರಾಜಕಾರಣಿ. ಸಹಿ ಸಂಗ್ರಹದಂತಹ ಚಟುವಟಿಕೆಗಳು ಎಲ್ಲ ಪಕ್ಷದಲ್ಲೂ ಇದ್ದದ್ದೇ.
ಆದ್ರೆ ಕೊರೊನಾದಂತಹ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ನಡೆಯಬಾರದಿತ್ತು ಎಂದರು.