Breaking News

ಯರಿನಾರಾಯಣಪೂರ ಗುಡೇನಕಟ್ಟಿ ಸರಕಾರಿ ರಸ್ತೆ ದುರಸ್ತಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

Spread the love

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಯರಿನಾರಾಯಣಪೂರ ಗುಡೇನಕಟ್ಟಿ ಸರಕಾರಿ ರಸ್ತೆ ದುರಸ್ತಿ ಮತ್ತು ಅಭಿವೃದ್ಧಿಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ ಅವರಿಗೆ ಗುಡೇಕಟ್ಡಿ ಗ್ರಾಮದ ಹಿರಿಯರು ಮನವಿ ಸಲ್ಲಿಸಿದರು.
ಈ ರಸ್ತೆ ಅಭಿವೃದ್ಧಿ ಕಾಣದೆ ಮುಳ್ಳು ಕಂಟಿ ಬೆಳೆದು ಹಾಳಾಗಿ ಹೋಗಿದೆ ಯರಿ ನಾರಾಯಣಪುರ ಗ್ರಾಮಸ್ಥರು ಗುಡೇನಕಟ್ಟಿ ಪಂಚಾಯಿತಿಗೆ ಬರಲು ಬರಲು ಇದೇ ದಾರಿಯನ್ನೇ ಅವಲಂಬಿತರಾಗಿದ್ದಾರೆ .‌‌ ಆದ್ದರಿಂದ ಬಹಳಷ್ಟು ತೊಂದರೆ ಆಗಿದೆ ಎಂದು ಮನವಿ ಮಾಡಿದರು. ಈ ಕುರಿತು
ಧಾರವಾಡ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರೆ ಅವರಿಗೆ ಮನವಿ ಸಲ್ಲಿಸಲಾಯಿತು. ಕೂಡಲೇ ಈ ರಸ್ತೆಯನ್ನು ಸರಿ ಮಾಡಿ ಜೊತೆಗೆ ಅಭಿವೃದ್ಧಿಪಡಿಸುವಂತೆ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು. ಮುಖಂಡರಾದ
ಬಸವರಾಜ ಕಮಲದಿನ್ನಿ, ಸಂತೋಷ್ ಬೆಡತೂರ, ಬಸವರಾಜ ಯೋಗಪ್ಪನವರ್, ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About Karnataka Junction

    Check Also

    ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಭಾರೀ ಗುಡುಗು ಸಿಡಿಲು ಮಿಶ್ರಿತ ಮಳೆ

    Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರ ಸೇರಿದಂತೆ ವಿವಿಧೆಡೆ ಶನಿವಾರ ಸಂಜೆ ಭಾರಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ …

    Leave a Reply

    error: Content is protected !!