ಹಿರಿಯ ಜೀವಿಗಳಿಗೆ ಹೃದಯ ಸ್ಪರ್ಶಿ ಸನ್ಮಾನ

Spread the love

ಹುಬ್ಬಳ್ಳಿ- ಭಾಳ ಸಂಜೆಯಲ್ಲಿರುವ, ಸಂಸಾರದ ಗೊಂದಲದಲ್ಲಿ ಮನೆಯವರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾದ ಅರವತ್ತು ಜನ ವಯೋವೃದ್ಧರಿಗೆ ಬುಧವಾರ ಸಂಜೆ ಸನ್ಮಾನದ ಸಂಭ್ರಮ. ಹೌದು ಈ ಅಪರೂಪದ ಕಾರ್ಯಕ್ರಮ ಉಣಕಲ್ ಸಿದ್ದಪ್ಪಜ್ಜನ ಜಾತ್ರಾ ಮಹೋತ್ಸವ ಸಮಿತಿ ಮಠದ ಕೈಲಾಸ ಮಂಟಪದಲ್ಲಿ ಏರ್ಪಡಿಸಿತ್ತು. ಎಪ್ಪತ್ತೈದು ವರ್ಷ ವಯಸ್ಸಿನ ಅರವತ್ತಕ್ಕೂ ಹೆಚ್ಚು ಮಹಿಳೆಯರು, ಪುರುಷ ವೃದ್ಧರನ್ನು ಹುಬ್ಬಳ್ಳಿ ಎರಡೆತ್ತಿನಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಶಾಲು ಹೊದಿಸಿ, ಮಾಲೆ ಹಾಕಿ ಗೌರವಿಸಿದರು. ಸ್ವಾಮಿಗಳಿಂದ ತಮಗೆ ಸಂದ ಗೌರವ ಬದುಕಿನಲ್ಲಿ ಮತ್ತೆ ಆಸೆ ಚಿಗುರುವಂತೆ ಮಾಡಿದೆ, ನಿತ್ಯ ಬದುಕಿನ ದುಗುಡ ಮರೆಯುವಂತೆ ಮಾಡಿದೆ, ಸಿದ್ದಪ್ಪಜ್ಜನ ಆಶೀರ್ವಾದ ತಮ್ಮಮೇಲಿದೆ ಎಂದು ಸನ್ಮಾನಿತ ವೃದ್ಧರನೇಕರು ಆನಂದ ಭಾಷ್ಪಗರೆದರು. ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ, ಸದಸ್ಯರಾದ ರಾಮಣ್ಣ ಪದ್ಮಣ್ಣವರ,ಅಡಿವೆಪ್ಪ ಮೆಣಸಿನಕಾಯಿ, ಶಿವಾಜಿ ಕನ್ನಕೊಪ್ಪ, ಪತ್ರಕರ್ತ ಕೃಷ್ಣಮೂರ್ತಿ ಕುಲಕರ್ಣಿ, ಚಿಂತಕರಾದ ಎಸ್.ಐ.ನೇಕಾರ ಮುಂತಾದವರು ವೇದಿಕೆಯಲ್ಲಿದ್ದರು, ಸನ್ಮಾನಕ್ಕೆ ಒಳಗಾದ ಕೆಲವು ವೃದ್ಧರ ಕುಟುಂಬ ವರ್ಗದವರು ಸಾಕ್ಷಿಯಾದರು.


Spread the love

About gcsteam

    Check Also

    ಐಎನ್​ಐಎಫ್​ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ

    Spread the loveಹುಬ್ಬಳ್ಳಿ: ನಗರದ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ …

    Leave a Reply