ಬಾಗಲಕೋಟೆ : ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ ನಡೆದ ಪ್ರಸಂಗ ಬಾದಾಮಿ ಪಟ್ಟಣದಲ್ಲಿ ಸಾಕ್ಷಿಯಾಯಿತು. ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರಿಂದ ಅಹವಾಲು ಸ್ವೀಕರಿಸುವ ವೇಳೆ ಗದ್ದಲ ಗಲಾಟೆ ನಡೆಯಿತು.
ಎರಡು ಗುಂಪಿನ ಮಧ್ಯೆ ವಾಕ್ಸಮರ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಬೇಲೂರ ಹೆಸ್ಕಾಮ್ ಸೆಕ್ಷನ್ ಆಪಿಸರ್ ಬಗ್ಗೆ ದೂರು ನೀಡಿದ ಬೇಲೂರು ಗ್ರಾಮದ ಕೆಲವರು. ಆಪೀಸ್ ರನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ. ಮಳೆಗಾಳಿಗೆ ಬಿದ್ದ ವಿದ್ಯುತ್ ಕಂಬ ದುರಸ್ತಿ ಮಾಡದ ಹಿನ್ನೆಲೆ ಆಪಿಸರ್ ವಿರುದ್ದ ಆರೋಪ ಮಾಡಲಾಯಿತು. ಈ ವೇಳೆ
ಆಫಿಸರ್ ಪರ ಕೆಲವರಿಂದ
ಸಿದ್ದರಾಮಯ್ಯ ಮುಂದೆ ವಾಗ್ದಾಳಿ ನಡೆಸಿದರು. ಈ ವೇಳೆ
ಪರಸ್ಪರ ತಳ್ಳಾಟ ನೂಕಾಟ ನಡೆಯಿತು.
