Breaking News

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೇ 15ರಷ್ಟು ಸಿಬ್ಬಂದಿಗಳ ವರ್ಗಾವಣೆಗೆ ಆದೇಶ

Spread the love

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಪ್ರಾಧ್ಯಾಪಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರು ಮುಂತಾದ ಸಿಬ್ಬಂದಿಗಳ ಪೈಕಿ ಶೇ.15ರಷ್ಟು ಮಂದಿಯನ್ನು ವರ್ಗಾವಣೆ ಮಾಡಲಾಗುವುದು. ಈ ಪ್ರಕ್ರಿಯೆ ಇದೇ ತಿಂಗಳಲ್ಲಿ ಮುಗಿಯಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಂಥಪಾಲಕರು ಮತ್ತು ಕ್ರೀಡಾ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಿಗೂ ಈ ವರ್ಗಾವಣೆ ನಿಯಮಗಳು ಅನ್ವಯವಾಗಲಿವೆ ಎಂದಿದ್ದಾರೆ.ಇಲಾಖೆಯ ನಿಯಮಗಳ ಪ್ರಕಾರ, ಶೇ 9ರಷ್ಟು ಕಡ್ಡಾಯ ವರ್ಗಾವಣೆ, ಪತಿ -ಪತ್ನಿ ಪ್ರಕರಣಗಳಲ್ಲಿ ಶೇ 3, ವಿಧವೆ/ಸಿಂಗಲ್ ಪೇರೆಂಟ್/ಮಹಿಳಾ ವಿಚ್ಛೇದಿತರ ಪ್ರಕರಣಗಳಲ್ಲಿ ಶೇ 1, ವಿಕಲಚೇತನರ ಶೇ 1 ಮತ್ತು ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವ ಸಿಬ್ಬಂದಿಯನ್ನು ಪರಿಗಣಿಸಿ ಶೇ 1ರಷ್ಟು (ಒಟ್ಟು ಶೇ 15) ವರ್ಗಾವಣೆಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ. ಕಡ್ಡಾಯ ಮತ್ತು ವಿಶೇಷ ಪ್ರಕರಣಗಳ ತಾತ್ಕಾಲಿಕ ವರ್ಗಾವಣೆ ಪಟ್ಟಿಯನ್ನು ಏಪ್ರಿಲ್ 13ರಂದು ಪ್ರಕಟಿಸಲಾಗುವುದು. ಇದಕ್ಕೇನಾದರೂ ಆಕ್ಷೇಪಣೆಗಳಿದ್ದಲ್ಲಿ ಏಪ್ರಿಲ್ 18ರೊಳಗೆ ಆನ್-ಲೈನ್ ಮೂಲಕ ಸಲ್ಲಿಸಬಹುದು. ಇದಾದ ಬಳಿಕ ವರ್ಗಾವಣೆ ಆದ್ಯತಾ ಪಟ್ಟಿ ಮತ್ತು ಕೌನ್ಸೆಲಿಂಗ್ ಮೂಲಕ ಭರ್ತಿ ಮಾಡುವ ಖಾಲಿ ಹುದ್ದೆಗಳ ವಿವರಗಳನ್ನು ಏಪ್ರಿಲ್ 21ರಂದು ಹೊರಡಿಸಲಾಗುವುದು. ನಂತರ ಏಪ್ರಿಲ್ 23 ಮತ್ತು 26ರಂದು ವಿಶೇಷ ಪ್ರಕರಣಗಳ ವರ್ಗಾವಣೆಗೆ ಹಾಗೂ ಏಪ್ರಿಲ್ 27 ರಿಂದ ಕಡ್ಡಾಯ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ವಿವರಿಸಿದ್ದಾರೆ.ಕೆಲವರಿಗೆ ವಿನಾಯಿತಿ: ಕೇವಲ 2 ವರ್ಷಗಳ ಸೇವಾವಧಿಯುಳ್ಳವರು, ಯುಜಿಸಿ ಮತ್ತಿತರ ಉನ್ನತ ಸಂಸ್ಥೆಗಳ ಪ್ರಾಜೆಕ್ಟ್ ಕೈಗೊಂಡಿರುವವರು, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಂಶೋಧನಾ ಮಾರ್ಗದರ್ಶಕರಾಗಿರುವವರು, ಎನ್.ಸಿ.ಸಿ. ಅಧಿಕಾರಿಗಳಾಗಿರುವವರು ಮತ್ತು ಉಪನ್ಯಾಸಕರ ಒಕ್ಕೂಟದಲ್ಲಿ ಪದಾಧಿಕಾರಿಗಳಾಗಿ ಇರುವವರು ಅಗತ್ಯ ಪ್ರಮಾಣಪತ್ರಗಳನ್ನು ಸಲ್ಲಿಸಿ, ವರ್ಗಾವಣೆಯಿಂದ ವಿನಾಯಿತಿ ಕೋರಿ, ಮನವಿ ಸಲ್ಲಿಸಬಹುದು.


Spread the love

About Karnataka Junction

[ajax_load_more]

Check Also

ಧಾರವಾಡ: ನಿಟ್ಟುಸಿರು ಬಿಟ್ಟ ಸಿಎಂ ಸಿದ್ದು, ಸ್ನೇಹಮಯಿ ಅರ್ಜಿಯನ್ನೇ ವಜಾಗೊಳಿಸಿದ ಹೈಕೋರ್ಟ್*

Spread the loveಧಾರವಾಡ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಈ ಭ್ರಷ್ಟಾಚಾರದಲ್ಲಿ ಸಿಎಂ ಸೇರಿ ಅವರ …

Leave a Reply

error: Content is protected !!