ಟೋಲ್ ಶುಲ್ಕ ಹೆಸರಲ್ಲಿ ಜನರಿಗೆ ತೊಂದರೆ- ಕಾಂಗ್ರೆಸ್ ಟೋಲ್ ತಡೆದು ಪ್ರತಿಭಟನೆ

Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಗದಗ ನಡುವೆ ಪ್ರಯಾಣಿಸುವ ಬಸ್‌ಗಳ ದರವನ್ನು ಸಾರಿಗೆ ಸಂಸ್ಥೆ 15 ರೂ. ಹೆಚ್ಚಿಸಿದ್ದನ್ನ ಖಂಡಿಸಿ ನಲವಡಿ ಟೋಲ್ ಗೇಟ್ ಬಳಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸಾರ್ವಜನಿಕರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಹುಬ್ಬಳ್ಳಿಯಿಂದ ಗದಗ ನಡುವೆ 60 ಕಿಲೋ ಮೀಟರ್ 60 ರೂ.ಗಳ ದರವನ್ನು ನಿಗದಿ ಮಾಡಲಾಗಿತ್ತು. ಈಗ ಏಕಾಏಕಿ 15 ರೂ. ಹೆಚ್ಚಿಸಲಾಗಿದ್ದು, 75 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಹೀಗಾಗಿ ನಿತ್ಯ ಹುಬ್ಬಳ್ಳಿಗೆ ಕೆಲಸ ಕಾರ್ಯಗಳಿಗೆ ಬರುವ ಜನರಿಗೆ ತೊಂದರೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಗೆ ನಿತ್ಯ ಗದಗ ಭಾಗದಿಂದ ರೈತರು, ವ್ಯಾಪಾರಸ್ಥರು, ವಿವಿಧ ಖಾಸಗಿ ನೌಕರರು, ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಆಗಮಿಸುತ್ತಾರೆ. ಈ ರೀತಿಯಾಗಿ ಏಕಾಏಕಿ ದರ ಏರಿಕೆ ಮಾಡಿರುವುದರಿಂದ ಆರ್ಥಿಕವಾಗಿ ಹೊಡೆತ ಬೀಳಲಿದೆ. ಅಲ್ಲದೆ ಸರಕಾರ ಟೋಲ್ ಶುಲ್ಕ ಪಾವತಿಸಲು ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ದರ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.
ನಲವಡಿ ಬಳಿ ಟೋಲ್:
ಹುಬ್ಬಳ್ಳಿ-ಗದಗ ಮಧ್ಯೆ ನೂತನವಾಗಿ ನಲವಡಿ ಬಳಿ ಟೋಲ್ ಸಂಗ್ರಹ ಕೇಂದ್ರ ಸ್ಥಾಪನೆ ಮಾಡಿದ್ದನ್ನು ತೆಗೆಯಲು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ, ಮಾತನಾಡಿದ ಕಾಂಗ್ರೆಸ್ ಮುಖಂಡ ವಿನೋದ ಅಸೂಟಿ ಹಾಗೂ ಎನ್ .ಎಚ್. ಕೋನರಡ್ಡಿ
ಟೋಲ್ ವಸೂಲಿ ಮಾಡಿರುವುದರದ ದರ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಟೋಲ್ ಹಣಕ್ಕಾಗಿ ಪ್ರತಿ ಪ್ರಯಾಣಿಕನಿಂದ 15 ರೂ. ಹೆಚ್ಚುವರಿ ವಸೂಲಿ ಮಾಡುತ್ತಿರುವುದನ್ನ ಕೈ ಬಿಡಿದಿದ್ದರೆ ಉಗ್ರ ಹೋರಾಟ ಮಾಡುವುದುದಾಗಿ ಎಚ್ಚರಿಕೆ ನೀಡಿದರು. ಮಂಜುನಾಥ ಮಾಯಣ್ಣವರ, ಅನೇಕ ಮುಖಂಡರು ಭಾಗವಹಿಸಿದ್ದರು ‌


Spread the love

Leave a Reply

error: Content is protected !!