ಬೆಂಗಳೂರು: 2021ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಮೆಡಲ್ ಪ್ರಕಟವಾಗಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ, ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗೆ ಪದಕ ನೀಡಲಾಗುತ್ತಿದೆ. ಸಿಐಡಿ ಡಿವೈಎಸ್ಪಿ ವೀರೇಂದ್ರ ಕುಮಾರ್, ಉಡುಪಿ ಡಿಎಆರ್ ವಿಭಾಗದ ಡಿವೈಎಸ್ಪಿ ರಾಘವೇಂದ್ರ ಆರ್ ನಾಯಕ್, ಇನ್ಸ್ಪೆಕ್ಟರ್ಗಳಾದ ಗೋವಿಂದಪುರ ಠಾಣೆ ಪಿಐ ಪ್ರಕಾಶ್, ಮಂಜುನಾಥ್, ನಟರಾಜ್, ಶಿವಕುಮಾರ್, ರಾವ್ ಗಣೇಶ್ ಜನಾರ್ಧನ್, ಸೇರಿದಂತೆ ಒಟ್ಟು 135 ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಪದಕ ಪ್ರಕಟ ಮಾಡಲಾಗಿದೆ. ಏಪ್ರಿಲ್ 2ರಂದು ಕೋರಮಂಗಲದ ಕೆಎಸ್ ಆರ್ ಪಿ ಗ್ರೌಂಡ್ ನಲ್ಲಿ ಪದಕಪ್ರಧಾನ ಕಾರ್ಯಕ್ರಮ ನಡೆಯಲಿದೆ.
