ಹುಬ್ಬಳ್ಳಿ : ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ವೇಳೆಯಲ್ಲಿ ಸಿಡಿಲು ಬಡಿದು ಇಬ್ಬರು ಕುರಿಗಾಯಿಗಳಿಗೆ ಗಂಭೀರ ಗಾಯವಾಗಿದೆ. ಇನ್ನೂ ಸ್ಥಳದಲ್ಲಿಯೇ 15 ಕುರಿಗಳು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಅಳಗವಾಡಿ ಸಮೀಪ ಗುರುವಾರ ಸಂಭವಿಸಿದೆ.
ಗೊಬ್ಬರಗುಂಪಿ ಗ್ರಾಮದ ದೇವಪ್ಪ ದ್ಯಾಮಪ್ಪ ಪೂಜಾರ (18) ಹಾಗೂ ಕರಿಯಪ್ಪ ದ್ಯಾಮಪ್ಪ ಪೂಜಾರ (16) ಇಬ್ಬರು ಸಹೋದರರಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಲಾಗಿದೆ.
ಸಂಜೆ ಹೊತ್ತು ಒಂದು ಗಂಟೆಗೂ ಹೆಚ್ಚು ಸುರಿದ ಬಾರಿ ಮಳೆಗಾಳಿಗೆ ಹಾಳಕುಸುಗಲ್ಲ ಹಾಗೂ ಅಳಗವಾಡಿ ಸುತ್ತಮುತ್ತಲಿನ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿದ್ದು, ಕೆಲವೊಂದು ಮನೆಗಳಿಗೆ ಹಾನಿಯಾಗಿದೆ ಎಂದು ತಹಶೀಲ್ದಾರ್ ನವೀನ್ ಹುಲ್ಲೂರ ತಿಳಿಸಿದ್ದಾರೆ.
