ಉಕ್ರೇನ್ ದಿಂದ ತಾಯ್ನಾಡಿಗೆ ನವೀನ್ ಶೇಖರಪ್ಪ ಗ್ಯಾನಗೌಡರ್ ಪಾರ್ಥಿವ ಶರೀರ

Spread the love

ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾ ನಡೆಸಿದಂತ ಶೆಲ್ ದಾಳಿಯಲ್ಲಿ ಮೃತಪಟ್ಟಂತ ಕರ್ನಾಟಕದ ನವೀನ್ ಗ್ಯಾನಗೌಡರ್ ಅವರ ಪಾರ್ಥೀವ ಶರೀರ ಇಂದು ಮುಂಜಾನೆ 2.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಸ್ವತಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಮುಂದೆ ನಿಂತು, ನವೀನ್ ಪಾರ್ಥೀವ ಶರೀರವನ್ನು ಬರಮಾಡಿಕೊಂಡರು.
ಈ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿಯವರು, ಯುದ್ಧಪೀಡಿದ ಉಕ್ರೇನ್ ಭೂಮಿಯಿಂದ 19 ಸಾವಿರ ಮಂದಿಯನ್ನು ಭಾರತ ಸರ್ಕಾರದಿಂದ ಕರೆತರಲಾಗಿದೆ. ಇವರಲ್ಲಿ ಕರ್ನಾಟಕದವರು 572 ಮಂದಿ ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ವಾಪಾಸ್ ಬಂದಿದ್ದಾರೆ. 67 ಜನರು ಮುಂಚಿತವಾಗಿಯೇ ವಾಪಾಸ್ ಆಗಿದ್ದಾರೆ. ಆದ್ರೇ ನವೀನ್ ಸಾವನ್ನಪ್ಪಿದ್ದು ದುರ್ಧೈವದ ಸಂಗತಿಯಾಗಿದೆ ಎಂದು ಹೇಳಿದರು.
ಉಕ್ರೇನ್ ಯುದ್ಧಭೂಮಿಯಲ್ಲಿ ಮೃತಪಟ್ಟಂತ ನವೀನ್ ಪಾರ್ಥೀವ ಶರೀರವನ್ನು ತರೋದಕ್ಕಾಗಿ ಸಂಸದರು, ಕೇಂದ್ರ ಸಚಿವರು ಪ್ರಯತ್ನಿಸಿ. ಉಕ್ರೇನ್ ನಲ್ಲಿ ರಷ್ಯಾ ಶೆಲ್ ದಾಳಿಗೆ ಮೃತಪಟ್ಟಿದ್ದಂತ ನವೀನ್ ಪಾರ್ಥೀವ ಶರೀರವನ್ನು ವಾಪಾಸ್ ತರೋದೆ ದೊಡ್ಡ ಸವಾಲ್ ಆಗಿತ್ತು. ಆದರೂ ಕೇಂದ್ರ ಸರ್ಕಾರದ ಪ್ರಯತ್ನದ ಮೂಲಕ, ಇಂದು ವಾಪಾಸ್ ತರಿಸಲಾಗಿದೆ ಎಂದರು.
ನವೀನ್ ಪಾರ್ಥೀವ ಶರೀರವನ್ನು ಮರ್ಚರಿಯಲ್ಲಿ ಸೇವ್ ಮಾಡಿ ಇಟ್ಟ ಕಾರಣ ತರುವಂತೆ ಆಗಿದೆ. ರಷ್ಯಾ ಶೆಲ್ ದಾಳಿಯ ನಡುವೆಯೂ ಅವರ ಪಾರ್ಥೀವ ಶೇರೀರ ತಾಯ್ನಾಡಿಗೆ ವಾಪಾಸ್ ತಂದಿರೋದು ಭಾರತ ಸರ್ಕಾರದ ಪ್ರಯತ್ನವಾಗಿದೆ. ಈ ಪ್ರಯತ್ನಕ್ಕೆ ಸಹಕರಿಸಿದಂತ ಪ್ರಧಾನಿ ಮೋದಿ, ಕೇಂದ್ರ ಸಚಿವರಿಗೆ ಧನ್ಯವಾದಗಳನ್ನು ಸಹ ತಿಳಿಸಿದರು.
ಈ ಬಳಿಕ ನವೀನ್ ಪಾರ್ಥೀವ ಶರೀರವನ್ನು ಅವರ ಸಹೋದರನಿಗೆ ಸಿಎಂ ಬೊಮ್ಮಾಯಿ ಹಸ್ತಾಂತರಿಸಿದರು. ಇಂದು ಮೃತ ನವೀನ್ ಹುಟ್ಟೂರು ಹಾವೇರಿ ಜಿಲ್ಲೆಯ ಚಳಗೇರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಸಿಎಂ ಬೊಮ್ಮಾಯಿಕೂಡ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ, ಅಂತಿಮ ನಮನವನ್ನು ಸಲ್ಲಿಸಲಿದ್ದಾರೆ.‡


Spread the love

About gcsteam

    Check Also

    ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

    Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …

    Leave a Reply