Breaking News

ಜೀವನದಲ್ಲಿ ನಿರ್ಧಿಷ್ಟ ಗುರಿ ಬೇಕು-ಕೇದಾರದ ಭೀಮಾಶಂಕರಲಿಂಗ ಸ್ವಾಮೀಜಿ

Spread the love

ಹುಬ್ಬಳ್ಳಿ: ‘ ಪ್ರತಿಯೊಬ್ಬರು ಜೀವನದಲ್ಲಿ ಗುರಿ ತಲುಪಬೇಕಾದರೆ ಒಂದು ಗುರಿ ಹೊಂದಿರಬೇಕು ಎಂದುಕೇದಾರದ ಭೀಮಾಶಂಕರಲಿಂಗ ಸ್ವಾಮೀಜಿ ಹೇಳಿದರು. ಇಲ್ಲಿನ ವಿಶ್ವೇಶ್ವರ ನಗರದ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ರಜತ್ ಉಳ್ಳಾಗಡ್ಡಿಮಠ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಸನಾತನ ಧರ್ಮ ಜಾಗೃತಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಗು ಹೊಟ್ಟೆಯಲ್ಲಿರುವಾಗಲೇ ಸಂಸ್ಕಾರ ಕಲಿಯುತ್ತದೆ. ತಾಯಿಯ ಪರಿಸರ, ಆಚಾರ–ವಿಚಾರ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ನಂತರ ಸನಾತನ ಪದ್ಧತಿಯ ಪರಂಪರೆಯ ಪದ್ಧತಿಯನ್ನು ಅವಲೋಕಿಸುತ್ತ ಬೆಳೆಯುತ್ತದೆ. ಕೇವಲ ಕಥೆ ಕೇಳಿದರೆ ಸಂಸ್ಕಾರ ಬರುವುದಿಲ್ಲ. ಅವುಗಳಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮಾನವೀಯತೆ ಮತ್ತು ಗುರು–ಹಿರಿಯರಲ್ಲಿ ಗೌರವದ ಭಾವದೊಂದಿಗೆ ಬದುಕಿದರೆ ಸಮಾಜ‌ ಪ್ರಗತಿಯಲ್ಲಿ ಸಾಗುತ್ತದೆ’ ಎಂದರು.
ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘50 ವರ್ಷಗಳ ಹಿಂದೆ ಸಂಸ್ಕಾರ ಮತ್ತು ಸಂಸ್ಕೃತಿ ಎಲ್ಲರಲ್ಲೂ ಹಾಸುಹೊಕ್ಕಾಗಿತ್ತು. ಅಂದಿನ ಕಾಲವನ್ನು ಈಗಿನ ದಿನಕ್ಕೆ ತುಲನೆ ಮಾಡಿದರೆ ಮನಸ್ಸಿಗೆ ನೋವಾಗುತ್ತದೆ. ಧರ್ಮ ಸಂಸ್ಕಾರದಂತಹ ಕಾರ್ಯಕ್ರಮಕ್ಕೆ ಪಾಲಕರು ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಸ್ವಾಮೀಜಿ ಮಾತುಗಳನ್ನು ಕೇಳುವುದರಿಂದ ಅವರಲ್ಲಿ ಮಾನವೀಯ ಭಾವ ಮೇಳೈಸುತ್ತದೆ. ಇಂದಿನ ಪಾಲಕರು ಮಕ್ಕಳಿಗೆ ಸರ್ವಸ್ವವನ್ನು ಧಾರೆ ಎರೆಯುತ್ತಾರೆ. ಆದರೆ, ಮಕ್ಕಳು ಅವರನ್ನು ಮುಪ್ಪಿನ ಕಾಲದಲ್ಲಿ ವೃದ್ಧಾಶ್ರಮಕ್ಕೆ ಕಳುಹಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕಣ್ವಕುಪ್ಪೆಯ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಪ್ರತಿಷ್ಠಾನ ವತಿಯಿಂದ ಕೋವಿಡ್‌ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದ ಶುಶ್ರೂಷಕರಿಗೆ ಕಿಟ್‌ ವಿತರಿಸಲಾಯಿತು. ಮುತ್ನಾಳದ ಸ್ವಾಮೀಜಿ, ನವನಗರದ ಹಿರೇಮಠ ಸ್ವಾಮೀಜಿ, ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ಶಂಕರಣ್ಣ ಮುನವಳ್ಳಿ, ಪ್ರಕಾಶ ಬೆಂಡಿಗೇರಿ, ರಜತ್‌ ಉಳ್ಳಾಗಡ್ಡಿಮಠ ಇದ್ದರು.


Spread the love

About Karnataka Junction

    Check Also

    ಧಾರವಾಡ ಲೋಕಸಭಾ ರಿಸಲ್ಟ್- ಇತಿಹಾಸ ಸೃಷ್ಟಿದ ಪ್ರಲ್ಹಾದ್ ಜೋಶಿ

    Spread the loveಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತನ್ನದೇ ಆದ‌ ಇತಿಹಾಸ ಮಹತ್ವ ಇದೆ. ಕರ್ನಾಟಕ ಅಷ್ಟೇ ಅಲ್ಲಾ ದೇಶದ …

    Leave a Reply

    error: Content is protected !!