https://youtu.be/UE8MfXwqAIA
ಹುಬ್ಬಳ್ಳಿ : ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ವಿಧಿಸಲಾದ ಲಾಕ್ ಡೌನ್ ನಲ್ಲಿ ಮುಂಚೂಣಿಯ ಯೋಧರಾಗಿ, ಹಗಲು ರಾತ್ರಿ ಮಹಾನಗರದಲ್ಲಿ ಶಿಸ್ತು ಕಾಪಾಡಿ, ಜನರ ಕ್ಷೇಮ ಸುನಿಶ್ಚಿತಗೊಳಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಆಮ್ ಆದ್ಮಿ ಪಕ್ಷದ ವತಿಯಿಂದ ಎನ್95 ಮಾಸ್ಕ್ ಗಳನ್ನೂ ಹಂಚುವ ಮತ್ತು ಸಿಬ್ಬಂದಿಗಳ ಆಮ್ಲಜನಕ ಮಟ್ಟದ ತಪಾಸಣೆ ನಡೆಸಿ ಅವರ ಆರೋಗ್ಯ ಕ್ಷೇಮ ವಿಚಾರಿಸುವ ಅಭಿಯಾನ ಆರಂಭಿಸಲ್ಲಾಗಿದೆ.
ಈ ಅಭಿಯಾನದ ಅಂಗವಾಗಿ, ಪಕ್ಷದ ಹುಬ್ಬಳ್ಳಿ-ಧಾರವಾಡ ಪೂರ್ವ-72 ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ, ಶ್ರೀಮತಿ ಲತಾ ಕೊಯಿಲೋ ಅವರ ನೇತೃತ್ವದಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆ ಮತ್ತು ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ N95 ಮಾಸ್ಕ್ ವಿತರಿಸಲಾಯಿತು. ನಂತರ ಸಿಬ್ಬಂದಿಗಳ ಆಮ್ಲಜನಕ ಮಟ್ಟ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಪ್ರಶಾಂತ ಹುಲಗೆರಿ, ಮಲ್ಲಿಕಾರ್ಜುನಯ್ಯ ಹಿರೆಮಠ, ರವಿ ಅರಳಿಕಟ್ಟಿ , ಚಂದ್ರು ಬಣಗಾರ ಮತ್ತಿತರರು ಉಪಸ್ಥಿತರಿದ್ದರು.