ಹುಬ್ಬಳ್ಳಿ;
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅರವಿಂದ್ ನಗರದ ಪಿಎನ್‌ಟಿ ಕ್ವಾಟರ್ಸ ಹಿಂದೆ ರಸ್ತೆಯಲ್ಲಿ ಅಕ್ಬರ್ ಅಲ್ಲಾಭಕ್ಷ ಮುಲ್ಲಾ ವಯಾ (೪೨),ತೋರವಿಹಕ್ಕಲ ನಿವಾಸಿ ಯಾಗಿದ್ದು ಮೂಲ ರೌಡಿ ಶೀಟರ್ ಹಳೇಹುಬ್ಬಳ್ಳಿ ಠಾಣೆ ಇತನು ಸಿಜೀಂಗ ಉದ್ಯೋಗ ಮಾಡುತ್ತಿರುತ್ತಾನೆ. ಸದಾನಂದ ಕುರ್ಲಿ( ೩೮) ಇತನೊಂದಿಗೆ ಹಣಕಾಸಿನ ವಿಷಯದಲ್ಲಿ ಮನೆಗೆ ಬಂದು ೫೦.೦೦೦ ರೂ. ಕೇಳಿದ್ದು ಈ ಹಿನ್ನೆಲೆಯಲ್ಲಿ ನನಗೆ ಕೊಡಲು ದುಡ್ಡು ಇರುವುದಿಲ್ಲ ಎಂದು ಸದಾನಂದ ಕುರ್ಲಿ ಇತನು ಹೇಳಿದ್ದ ಇದರಿಂದ ಕುಪಿತನಾಗಿ ಬೈದಾಡಿ ನಂತರ ರೌಡಿ ಶಿಟರ ಅಕ್ಬರ್ ಮುಲ್ಲಾ ಇತನು ತಂದಿದ್ದ ಮಚ್ಚಿನಿಂದ ಹಲ್ಲೆ ಮಾಡಿದಾಗ ಸದಾನಂದ ಕುರ್ಲಿ ತಪ್ಪಿಸಿಕೊಂಡು ಅದೇ ಆಯುಧದಿಂದ ಸದಾನಂದ ಅಕ್ಬರ್ ಮೇಲೆ ತೆಲೆಗೆ ಹಲ್ಲೆ ಮಾಡಿದ್ದು ಇದರಿಂದ ಸ್ಥಳದಲ್ಲಿ ಅಕ್ಬರ್ ಇತನು ಮೃತಪಟ್ಟ ಬಗ್ಗೆ ಮಾಹಿತಿ ತಿಳಿದು ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
