Breaking News

ಹುಬ್ಬಳ್ಳಿ ಜೆಸಿ‌ ನಗರದ ಮಹಿಳಾ ಮಹಾವಿದ್ಯಾಲಯದಲ್ಲಿ ಹಿಜಾಬ್ ಗದ್ದಲ, ನಿಷೇಧಾಜ್ಞೆ ಜಾರಿ

Spread the love

ಹುಬ್ಬಳ್ಳಿ; ಇಲ್ಲಿನ ಜೆ.ಸಿ. ನಗರದ ಮಹಿಳಾ ಮಹಾವಿದ್ಯಾಲಯದ 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತರಗತಿ ಕೊಠಡಿಗೆ ಹೋಗುತ್ತೇವೆ ಎಂದು ಬುಧವಾರ ಪಟ್ಟು ಹಿಡಿದ ಪರಿಣಾಮ, ಕಾಲೇಜ್ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು
ಮುಸ್ಲಿಂ ಸಂಘಟನೆಯ ಕೆಲವು ಮುಖಂಡರು ವಿದ್ಯಾರ್ಥಿನಿಯರ ಜೊತೆ ಸೇರಿ, ಕಾಲೇಜು ಆವರಣದ ಮುಂಭಾಗ ಪ್ರತಿಭಟನೆ ನಡೆಸಿದರು. ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಅಧ್ಯಕ್ಷ ಯುಸೂಪ್ ಸವಣೂರು, ಅಲ್ತಾಫ್ ಕಿತ್ತೂರು, ಅಲ್ತಾಫ್ ಹಳ್ಳೂರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮುಂಜಾಗ್ರತಾ ಕ್ರಮವಾಗಿ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಲಾಗಿದೆ.
ಪೊಲೀಸ್ ಕಮಿಷನರ್ ಲಾಭೂರಾಮ್, ‘ಕಾಲೇಜಿನ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಸಹ ಘೋಷಿಸಲಾಗಿದೆ’ ಎಂದರು


Spread the love

About Karnataka Junction

    Check Also

    ತಾವು ಬೇಸಿಗೆಯ ರಜೆಗಾಗಿ ವಿಶೇಷ ರೈಲುಗಳ ಸಂಚಾರ ಮಾಹಿತಿ ಇಲ್ಲಿದೆ

    Spread the loveಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮುಜಾಫರ್ಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಎರಡು ಹೆಚ್ಚುವರಿ …

    Leave a Reply

    error: Content is protected !!