Breaking News

ಧಾರವಾಡದ ಲಕ್ಮಾಪುರ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ್ದ ಗ್ರಾಮ ದೇವತೆ ಜಾತ್ರೆ.

Spread the love

ಧಾರವಾಡ ತಾಲ್ಲೂಕಿನ ಲಕ್ಮಾಪುರ ಗ್ರಾಮದಲ್ಲಿ ಶ್ರೀ ದ್ಯಾಮವ್ಬ ಹಾಗೂ ದುರ್ಗಮ್ಮ ಜಾತ್ರೆಯನ್ನು ಗ್ರಾಮಸ್ಥರು ಅದ್ದೂರಿಯಾಗಿ ಆಚರಣೆ ಮಾಡಿದರು. ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಗ್ರಾಮದಲ್ಲಿ‌ ಹಬ್ಬದ ವಾತವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರೆಲ್ಲರು ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲುಸಿದರು. ಮಹಿಳೆಯರೆಲ್ಲರು ಕುಂಭಮೇಳ ಹಾಗೂ ಆರತಿ ತಟ್ಟೆಯೊಂದಿಗೆ ಗ್ರಾಮದ‌ ಮುಖ‌ ರಸ್ತೆಯಲ್ಲಿ ದ್ಯಾಮವ್ವ ಮತ್ತು ದುರ್ಗಮ್ಮಾ ದೇವಿಯ ಮೂರ್ತಿಯನ್ನು ಮೆರವಣಿಗೆ ಮಾಡಿದರು. ‌ಇನ್ನೂ ಇದೇ ವೇಳೆ ಗ್ರಾಮದ ಯುವಕರು ಜಾಂಜ್ ಮೇಳದ ಮೂಲಕ ದೇವಿಯ ಮೆರವಣಿಗೆಯಲ್ಲಿ ಭಾಗವಹಿಸಿ ಅದ್ದೂರಿಯಾಗೆ ಉತ್ಸವದಲ್ಲಿ‌ ಭಾಗಿಯಾದರು. ಗ್ರಾಮಸ್ಥರು ತಮ್ಮ ಮನೆಯ ಬಳಿ ಮೂರ್ತಿ ಬರುತ್ತಿದಂತೆ‌ ಅಂಗಳದಲ್ಲಿ ದೇವರ ಮೂರ್ತಿಗೆ ವಿಶೇಷ ಪುಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ‌ ಪ್ರಾರ್ಥನೆ ಸಲ್ಲಿಸಿದರು.


Spread the love

About gcsteam

    Check Also

    ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರಿಂದ ನಾಳೆ ಐಐಟಿಯಲ್ಲಿನ ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ ಉದ್ಘಾಟನೆ

    Spread the loveಧಾರವಾಡ ಫೆ.29: ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್‌ಕರ್ ಅವರು ನಾಳೆ ಮಾರ್ಚ್ 1, …

    Leave a Reply