ಹುಬ್ಬಳ್ಳಿ- ತಾಲೂಕಿನ ಪಾಳೆ ಗ್ರಾಮದ ಪ್ರಗತಿ ಪರ ರೈತರು ಹಾಗೂ ಮಹದಾಯಿ ಹೋರಾಟಗಾರರಾದ ಹೇಮನಗೌಡರ ಬಸವನಗೌಡರ ಪತ್ನಿ ವಿದ್ಯಾವತಿ ಹೇಮನಗೌಡರ ಬಸವನಗೌಡರ (50) ಇತ್ತೀಚೆಗೆ ನಿಧನರಾದರು. ಕೇಲ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಮೃತರು ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿ ನವನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು .
ಮೃತರು ಪತಿ ಮಹದಾಯಿ ಹೋರಾಟಗಾರ
ಹೇಮನಗೌಡರ ಬಸವನಗೌಡರ. ಸೇರಿದಂತೆ ಮೂವರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಪತಿ ಹೇಮನಗೌಡರ ಮಹದಾಯಿ ಹೋರಾಟಕ್ಕೆ ಬೆನ್ನಲು ಆಗಿ ನಿಂತಿದ್ದ ವಿದ್ಯಾವತಿಯವರು ಸಾಕಷ್ಟು ರೈತ ಪರ ಸಂಘಟನೆಗಳಿಗೆ ಬೆಂಬಲ ನೀಡಿದ್ದರು. ಮೃತ ವಿದ್ಯಾವತಿ ಅವರ ಪುಣ್ಯಾರಾಧನೆ ಗುರುವಾರ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.