ಸರ್ಕಾರದ ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಯತ್ನ; ಶಾಸಕ ಅಮೃತ ದೇಸಾಯಿ ಭರವಸೆ

Spread the love

ಧಾರವಾಡ;.ಅಲೆಮಾರಿ ಬುಡಕಟ್ಟು ಮೇದಾರ ಸಮಾಜಕ್ಕೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಮಾಣಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಅಮೃತ ದೇಸಾಯಿ ಭರವಸೆ ನೀಡಿದರು.
ಅಲೆಮಾರಿ ಬುಡಕಟ್ಟು ಮೇದಾರ ಮಹಾಸಂಘ ಹಾಗೂ ಶ್ರೀ ಅಮೃತ ಜ್ಞಾನಜ್ಯೋತಿ ಸೇವಾ ಸಂಸ್ಥೆ ಆಶ್ರಯದಲ್ಲಿ ಭಾನುವಾರ
ನಗರದ ಕೋರ್ಟ್ ವೃತ್ತ ಬಳಿಯ ಭಗಿನಿ ಸಮಾಜದಲ್ಲಿ ಅಲೆಮಾರಿ ಬುಡಕಟ್ಟುಮೇದಾರರ ಮಹಾಸಂಘದ ಧಾರವಾಡ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಒಗ್ಗಟ್ಟಿನಿಂದ ಯಾವುದೇ ಯೋಜನೆ ಸಹ ಪಡೆಯಬಹುದು. ‌ಕಾರಣ ತಾವು ಸಮಾಜದ ಅಭಿವೃದ್ಧಿಗೆ ಸರ್ಕಾರದ ಯಾವುದೇ ಯೋಜನೆ ಇರಲಿ ಸಿಗುವಲ್ಲಿ ಶ್ರಮಿಸುತ್ತೇನೆ ಎಂದರು.
ಅಖಿಲ್ ಕರ್ನಾಟಕ ಬುಡಕಟ್ಟು ಮಹಾ ಪ್ರಧಾನ ಕಾರ್ಯದರ್ಶಿ ಕಿರಣಕುಮಾರ ಕೊತಗೇರಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಮೇದಾರ ಸಮಾಜ ನಿಗಮ ಮಂಡಳಿ ಮಾಡಬೇಕು ಎಂದು ಶಾಸಕರನ್ನ ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ತಿಪ್ಪಣ್ಣ ಶಿರಹಟ್ಟಿ, ಅತಿಥಿಗಳಾಗಿ ಬಸವರಾಜ ಬೆಟಗೇರಿ, ಮೇದಾರ ಸಮಾಜದ ರಾಜ್ಯಾಧ್ಯಕ್ಷ ಸದಾನಂದ ಬುಡ್ಡರ್,
ಗಣೇಶ ಮುಧೋಳ, ಬಸವರಾಜ ಶಿರಹಟ್ಟಿ, ವೆಂಕಟರಮಣಯ್ಯ, ಆದರ್ಶ ಯಲ್ಲಪ್ಪ , ನಾಗರಾಜ ಬೆಳವಡಿ, ಸದಾನಂದ ಬುಡ್ಡರ
ಅರುಣ ಹೆಬ್ಬಳ್ಳಿ, ಶಿವಪ್ಪ ಹೆಬ್ಬಳ್ಳಿ.ವಿಷ್ಣು ಹೆಬ್ಬಳ್ಳಿ, ವೆಂಕಟೇಶ ಹೆಬ್ಬಳ್ಳಿ., ಶಂಕರ ಸವಟಗಿ, ಆನಂದ ಹೆಬ್ಬಳ್ಳಿ, ಪ್ರಕಾಶ ಹೆಬ್ಬಳ್ಳಿ ಹಾಗೂ ಧಾರವಾಡ ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಗ್ರಾಮದ ಸಮಾಜದ ಭಾಂದವರು ಭಾಗವಹಿಸಿದ್ದರು.


Spread the love

About gcsteam

    Check Also

    ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

    Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …

    Leave a Reply