Breaking News

ಕರ್ನಾಟಕ ರಾಜ್ಯೋತ್ಸವದ ಮಹತ್ವ ಅರಿಯಬೇಕಿದೆ ನಾವು

Spread the love

ಹುಬ್ಬಳ್ಳಿ; ನಾವೀಗ ಇನ್ನೊಂದು ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂಭ್ರಮದಲ್ಲಿದ್ದೇವೆ. ಕರ್ನಾಟಕ ರಾಜ್ಯೋತ್ಸವದ ಆಚರಣೆ, ಹಿನ್ನೆಲೆ, ಅದರ ಮಹತ್ವ ಸ್ವಲ್ಪ ಆದರೂ ತಿಳಿಯಲೇಬೇಕಾಗಿದೆ.


ಕರ್ನಾಟಕದ ಹುಟ್ಟಿಗೆ ಕಾರಣರಾದ ಕನ್ನಡದ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಕಟರಾಯರು ಮೊದಲಿಗೆ ಅಂದರೆ ಸ್ವಾತಂತ್ರ್ಯಪೂರ್ವ 1905 ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ ರಾಜ್ಯವನ್ನು ನಂಬರ್1 1956 ರಲ್ಲಿ ವಿಂಗಡಿಸಿದರು. ಹೈದರಾಬಾದ್ ಪ್ರಾಂತ್ಯದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು, ಮೈಸೂರು ರಾಜ್ಯ ಉದಯವಾಯಿತು. ಮೈಸೂರು ರಾಜ್ಯವನ್ನು ಉತ್ತರ ಕರ್ನಾಟಕ, ಹಳೆಯ ಮೈಸೂರು, ಹಾಗೂ ಮಲೆನಾಡು ಎಂಬ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. *ಕರ್ನಾಟಕ ಹೆಸರು ಬಂದಿದ್ದು ಕರ್ನಾಟಕ ಪದದ ಮೂಲ ಸಂಸ್ಕೃತ. ‘ಸಂಸ್ಕೃತ’ ಕನ್ನಡ ಎಂಬ ಪದದಿಂದ ಕರ್ನಾಟಕ ಹುಟ್ಟಿಕೊಂಡಿದೆ. ಕನ್ನಡ ನಾಡು, ಕನ್ನಾಡು, ಕನ್ನಡಿಗರ ನಾಡು ಎಂಬುದು ಇದರ ಅರ್ಥವಾಗಿದೆ. ಆದರೆ ಕರ್ನಾಟಕ ಎಂಬ ಪದದ ಹುಟ್ಟಿನ ಬಗ್ಗೆ ಇನ್ನೂ ಹಲವಾರು ಅಭಿಪ್ರಾಯಗಳಿವೆ. 1972 ಜುಲೈನಲ್ಲಿ ಉತ್ತರ ಕರ್ನಾಟಕದ ಜನತೆಯ ಮಾನ್ಯತೆಗಾಗಿ “ಮೈಸೂರು” ಎಂಬ ಹೆಸರಿನ ಬದಲು “ಕರ್ನಾಟಕ” ಎಂಬ ನಾಮಕರಣ ಮಾಡಬೇಕೆಂಬ ಚರ್ಚೆ ಭುಗಿಲೆದ್ದಿತ್ತು. ಚರ್ಚೆಗಳ ನಂತರ ರಾಜ್ಯ ವಿಧಾನ ಸಭೆಯಲ್ಲಿ ಸರ್ವಾನುಮತದಿಂದ ಅನುಮತಿ ದೊರೆಯಿತು. *ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರು* ಕನ್ನಡ ನಾಡು ಏಕೀಕರಣ ಮಾಡಲು ನಾಡಿನ ಹಲವಾರು ಕವಿಗಳು, ನಟರು, ವಿಚಾರವಂತರು ಸೇರಿದಂತೆ ಹಲವಾರು ಮಹನೀಯರ ಕೊಡುಗೆ ಅಪಾರವಾದುದು. ಕೆ ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕೆಂಗಲ್ ಹನುಮಂತರಾಯ, ಅಲ್ಲಂ ಸುಮಂಗಳಮ್ಮ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಪಾಟೀಲ್ ಪುಟ್ಟಪ್ಪ ಸೇರಿದಂತೆ ನೂರಾರು ಮಹನೀಯರು ಲಕ್ಷಾಂತರ ಪ್ರಜೆಗಳ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಯಿತು. ನವೆಂಬರ್ 1 ಕನ್ನಡ ನಾಡಿನ ಮರುಹುಟ್ಟಿನ ದಿನದ ಅಂಗವಾಗಿ ನಾಡಿನ ಸಮಸ್ತ ಜನತೆಯೂ ಯಾವುದೇ ಜಾತಿ, ಧರ್ಮ, ಪಂಥಗಳ ಬೇಧವಿಲ್ಲದೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಕುಂಕುಮ ಹಾಗೂ ಅರಿಶಿಣದ ಸಂಕೇತ ಕರ್ನಾಟಕ ಹಳದಿ, ಕೆಂಪು ಮಿಶ್ರಿತ ಧ್ವಜವನ್ನು ಸರಕಾರಿ ಕಂಪನಿ, ಕಛೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಹಾರಿಸುತ್ತಾ “ಜಯ ಭಾರತ ಜನನಿಯ ತನುಜಾತೆ” ಎಂಬ ನಾಡಗೀತೆ ಸೇರಿದಂತೆ, ನಾಡಿನ ಹಿರಿಮೆಯನ್ನು ಬಿಂಬಿಸುವ ಗೀತೆಗಳ ಮೂಲಕ ರಾಜ್ಯೋತ್ಸವವನ್ನು ಸಂತೋಷ, ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತದೆ. ತಾಯಿ ಭುವನೇಶ್ವರಿಯ ಪಾದ ಕಮಲಗಳಿಗೆ ಪೂಜಿಸುವುದರ ಜೊತೆಗೆ ತಾಯಿಯ ಮೆರವಣಿಗೆಯ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯೋತ್ಸವವನ್ನು ಕಣ್ತುಂಬಿಕೊಂಡ ನಾವೆಲ್ಲರೂ ಧನ್ಯರು. ಈ ಬಾರಿ ಕರ್ನಾಟಕ ರಾಜ್ಯೋತ್ಸವವನ್ನು ಕರೋನ ರೋಗದ ನಿಯಮಗಳ ಪಾಲನೆ ಮಾಡುವುದರ ಜೊತೆಗೆ ನಾವೆಲ್ಲರೂ ಸೇರಿ ಹಬ್ಬದಂತೆ ಆಚರಿಸೋಣ..


Spread the love

About Karnataka Junction

[ajax_load_more]

Check Also

ಎಸ್. ಜೆ. ಎಮ್. ವಿ.ಮಹಾಂತ ಪ್ರಥಮ ದರ್ಜೆ ಕಲಾ, ವಾಣಿಜ್ಯ ಕಾಲೇಜಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

Spread the loveಎಸ್. ಜೆ. ಎಮ್. ವಿ.ಮಹಾಂತ ಪ್ರಥಮ ದರ್ಜೆ ಕಲಾ, ವಾಣಿಜ್ಯ ಕಾಲೇಜಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ …

Leave a Reply

error: Content is protected !!