Breaking News

ಹುಬ್ಬಳ್ಳಿ ಜೈನ್‌ ಯೂತ್‌ ಫೆಡರೇಷನ್‌ಗೆ ರಾಜ್ಯೋತ್ಸವ ಗರಿ

Spread the love

ಹುಬ್ಬಳ್ಳಿ: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಭಾನುವಾರ ಪ್ರಕಟವಾಗಿದ್ದು, ಅತ್ಯುತ್ತಮ ಸಮಾಜ ಸೇವೆ ಮಾಡುತ್ತಿರುವ ಆಲ್‌ ಇಂಡಿಯಾ ಜೈನ್‌ ಯೂತ್‌ ಫೆಡರೇಷನ್‌ ಹುಬ್ಬಳ್ಳಿ ಮಹಾವೀರ ಲಿಂಬ್‌ ಸೆಂಟರ್‌ ಸಂಸ್ಥೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ. ‌
ಜೈನ್‌ ಯೂತ್‌ ಫೆಡರೇಷನ್‌ನ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಪ್ರತಿಕ್ರಿಯೆ ನೀಡಿ ‘ಸಂಸ್ಥೆಯ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಸಂತಸ ಮೂಡಿಸಿದೆ. ಸಂಸ್ಥೆ ಕಳೆದ 20 ವರ್ಷಗಳಿಂದ 200ಕ್ಕೂ ಹೆಚ್ಚು ಕೃತಕ ಕಾಲು ಜೋಡಣಾ ಶಿಬಿರಗಳನ್ನು ಆಯೋಜಿಸಿದ್ದು, 40 ಸಾವಿರ ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಈ ಪ್ರಶಸ್ತಿ ಅವರ ಸೇವೆಗೆ ಸಂದ ಗೌರವ’ ಎಂದರು.
‘ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಸಂಸ್ಥೆಯ ಜವಾಬ್ದಾರಿ ಹೆಚ್ಚಿಸಿದೆ. ಮತ್ತಷ್ಟು ಸಮಾಜ ಸೇವೆ ಕೆಲಸ ಮಾಡಲು ಸ್ಫೂರ್ತಿ ಸಿಕ್ಕಿದೆ. ಸಂಸ್ಥೆಯು ಸೀಳು ತುಟಿ ಸಮಸ್ಯೆ ಎದುರಿಸುತ್ತಿದ್ದ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆಗೆ ನೆರವಾಗಿದೆ. ಬಸ್‌ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಬಡ ವಿ‌ದ್ಯಾರ್ಥಿಗಳಿಗೆ ಅಹಿಂಸಾ ನೋಟ್‌ ‍ಪುಸ್ತಕ ವಿತರಿಸಲಾಗುತ್ತಿದೆ. ಅಲ್ಲದೇ ಮಹಾವೀರ ಪಠ್ಯಪುಸ್ತಕ ಬ್ಯಾಂಕ್‌ನಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡಲಾಗುತ್ತಿದೆ’ ಎಂದರು.
‘ಕೃತಕ ಕಾಲು ಜೋಡಣೆಗೆ ಉತ್ತರ ಕರ್ನಾಟಕದ ಜನ ಜೈಪುರಕ್ಕೇ ಹೋಗಬೇಕಾಗಿತ್ತು. ಸಂಸ್ಥೆ ಈ ಸಮಸ್ಯೆಯನ್ನು ತಪ್ಪಿಸಿ ಸಾವಿರಾರು ಜನ ಅಂಗವಿಕಲರಿಗೆ ‌ಕೃತಕ ಕಾಲು ಜೋಡಣೆ ಮಾಡಲು ನೆರವಾಗಿದೆ. ಈ ಹಂತದಲ್ಲಿ ಜೈನ್‌ ಯೂತ್‌ ಫೆಡರೇಷನ್‌ನೊಂದಿಗೆ ಹಲವು ಸಂಸ್ಥೆಗಳು ಕೈಜೋಡಿಸಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜ ಸೇವೆ ಗುರಿ ಹೊಂದಿದ್ದೇವೆ’ ಎಂದರು.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!