ಹುಬ್ಬಳ್ಳಿ; ನವನಗರದಲ್ಲಿ ಅ.17 ರಂದು ಚರ್ಚ್ ಮೇಲೆ ದಾಳಿ ನಡೆಸಿದ್ದವರ ವಿರುದ್ಧ ಎಫ್ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮಿಷನರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿನಂದಿಸಿದ್ದಾರೆ.
ಪೊಲೀಸ್ ಸಂಸ್ಮರಣೆ ದಿನದ ಸಂದರ್ಭದಲ್ಲಿ ನಿಮ್ಮ ಈ ದಿಟ್ಟ ನಡೆಯನ್ನು ಪ್ರಶಂಸಿಸುತ್ತೇನೆ. ಈ ನೆಲದ ಕಾನೂನು ಎತ್ತಿ ಹಿಡಿದ ನಿಮ್ಮ ಬಗ್ಗೆ ಹೆಮ್ಮೆಯೆನಿಸುತ್ತದೆ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮಾಜದ ಶಾಂತಿಗೆ ಭಂಗ ತರುವ ಇಂಥ ಕಿಡಿಗೇಡಿಗಳ ವಿರುದ್ಧ ತಾವು ಕಾನೂನು ಕ್ರಮ ಕೈಗೊಂಡು ಖಾಕಿ ಸಮವಸ್ತ್ರ ಹಾಗೂ ಪೊಲೀಸ್ ಇಲಾಖೆಯ ಗೌರವವನ್ನು ಕಾಪಾಡಿದ್ದೀರಿ. ಇದಕ್ಕಾಗಿ ಮತ್ತೊಮ್ಮೆ ಹಾರ್ದಿಕ ಅಭಿನಂದನೆಗಳು ಎಂದೂ ಅವರು ತಿಳಿಸಿದ್ದಾರೆ.
