Breaking News

ಚಿರತೆ ಪತ್ತೆಯಾದರು ಕೊನೆಗೂ ಸೆರೆ ಇಲ್ಲ

Spread the love

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೇರಿದಂತೆ ಜಿಲ್ಲೆ ಜನರ ನಿದ್ರೆಗೆಡಿಸಿದ ಚಿರತೆ ಗುರುವಾರ ರಾತ್ರಿ ಧಾರವಾಡ ತಾಲೂಕಿನ ಕವಲಗೇರೆಯಲ್ಲಿ ಇರುವುದು ಕೊನೆಗೂ ಖಚಿತಗೊಂಡಿದೆ. ಆದರೆ, ಎಷ್ಟೇ ಹರಸಾಹಸಪಟ್ಟರೂ ಚಿರತೆಯ ಸೆರೆ ಕಷ್ಟವಾಗುತ್ತಿದ್ದು, ಅದು ಕ್ಷಣಕ್ಷಣಕ್ಕೂ ಸ್ಥಳ ಬದಲಾಯಿಸುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹುಬ್ಬಳ್ಳಿ ನೃಪತುಂಗ ಬೆಟ್ಟದಲ್ಲಿ ಕಾಣಿಸಿಕೊಂಡಿದೆ ಎನ್ನಲಾದ ಚಿರತೆ ಹುಬ್ಬಳ್ಳಿಯ ಕೇಂದ್ರಿಯ ವಿದ್ಯಾಲಯ, ಧಾರವಾಡದ ಕವಲಗೇರೆ, ಕಬ್ಬೆನ್ನೂರು, ಹಾರೋಬೆಳವಡಿ ಪ್ರದೇಶದಲ್ಲಿ ಓಡಾಡಿದೆ ಎಂದೇ ಅಂದಾಜಿಸಲಾಗಿತ್ತು. ಕೊನೆಗೆ ಕವಲಗೇರೆಯ ಕಬ್ಬಿನ ತೋಟವೊಂದರಲ್ಲಿ ಚಿರತೆ ಇರುವಿಕೆಯನ್ನು ಖಚಿತಪಡಿಸಿಕೊಂಡು ಗುರುವಾರ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಚಿರತೆ ಇನ್ನೇನು ಸೆರೆಯಾಗಲಿದೆ ಎನ್ನುತ್ತಿರುವಾಗಲೇ ಅಲ್ಲಿಂದ ಸ್ಥಳಾಂತರಗೊಂಡಿದೆ.
ಚಿರತೆ ಹೆಜ್ಜೆಗುರುತು, ಮಲ-ಮೂತ್ರ ವಿಸರ್ಜನೆಯ ಕುರುಹು ಆಧಾರದ ಮೇಲೆ ವನ್ಯಜೀವಿ ತಜ್ಞರ ಸಲಹೆಯಂತೆಯೇ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳೂ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಕವಲಗೇರೆಯ ಕತ್ತಿಯವರ ಕಬ್ಬಿನ ತೋಟದಲ್ಲಿ ಚಿರತೆ ಇರುವಿಕೆಯನ್ನು ಖಚಿತಪಡಿಸಿಕೊಂಡು ಕೂಬಿಂಗ್ ನಡೆಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಅದು ಮತ್ತೊಂದು ತೋಟ ಸೇರಿದೆ. ಹೀಗಾಗಿ ಶುಕ್ರವಾರವೂ ಕಾರ್ಯಾಚರಣೆ ಮುಂದು ವರಿಯುವ ಸಾಧ್ಯತೆಗಳಿವೆ.
ಕವಲಗೇರಿ ಗ್ರಾಮದಲ್ಲಿ ಚಿರತೆ ಕಂಡುಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಕವಲಗೇರಿ ಗ್ರಾಮಕ್ಕೆ ಭೇಟಿ ನೀಡಿ, ಕಾರ್ಯಾಚರಣೆ ಪರಿಶೀಲಿಸಿದರು. ಅರಣ್ಯ ಇಲಾಖೆ ಅಕಾರಿಗಳಿಂದ ಕೂಬಿಂಗ್ ಕಾರ್ಯದ ಕುರಿತು ಮಾಹಿತಿ ಪಡೆದರು. ಡ್ರೋಣ್ ಕ್ಯಾಮೆರಾ ಬಳಕೆ ಮಾಡಿ ತೋಟದಲ್ಲಿ ಪರಿಶೀಲನೆ ನಡೆಸಿದಾಗ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಇದೇ ಆಧಾರದ ಮೇಲೆ ಕಬ್ಬಿನ ತೋಟದ ಹೊರಗೆ ಪಟಾಕಿ ಸಿಡಿಸುವ ಜತೆಗೆ ತೋಟದ ಸುತ್ತಲೂ ಅರವಳಿಗೆ ಮದ್ದು ಸಿಡಿಸಲು ಪರಿಣಿತರ ತಂಡವನ್ನು ನಿಯೋಜನೆ ಮಾಡಲಾಗಿತ್ತು. ಗುರುವಾರ ರಾತ್ರಿ 12.30ರ ಹೊತ್ತಿಗೆ ಚಿರತೆ ಶಿವಪ್ಪ ಕತ್ತಿಯವರ ತೋಟದಿಂದ ಹೊರಗೆ ಓಡಿಬಂದಿದ್ದು ಇದನ್ನು ಗ್ರಾಮಸ್ಥರು ಕಣ್ಣಾರೆ ಕಂಡಿದ್ದಾರೆ. ಅದೃಷ್ಟವಶಾತಃ ಈ ವೇಳೆ ಚಿರತೆ ಯಾರ ಮೇಲೆಯೂ ದಾಳಿ ಮಾಡಿಲ್ಲ.


Spread the love

About Karnataka Junction

[ajax_load_more]

Check Also

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು

Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …

Leave a Reply

error: Content is protected !!