ಹುಬ್ಬಳ್ಳಿ: ನಗರದ ಹವ್ಯಾಸಿ ಸೈಕ್ಲಿಸ್ಟ್ ಬಸನಗೌಡ ಶಿವಳ್ಳಿ (35) ಸ್ನೇಹಿತರ ಜೊತೆಗೆ ಸೈಕಲ್ ರೈಡ್ ನಡೆಸುವ ವೇಳೆ ಕುಸಿದು ಬಿದ್ದು ಶನಿವಾರ ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಶನಿವಾರ ಒಟ್ಟು 200 ಕಿ.ಮೀ. ಸೈಕಲ್ ಓಡಿಸುವ ಗುರಿ ಹೊಂದಲಾಗಿತ್ತು. ಹುಬ್ಬಳ್ಳಿಯಿಂದ ಶಿಗ್ಗಾವಿಗೆ ಹೋಗಿ ವಾಪಸ್ ಬರುವುದು, ಹುಬ್ಬಳ್ಳಿಯಿಂದ ಕಿತ್ತೂರಿಗೆ ಹೋಗಿ ಮರಳುವುದು ಗುರಿಯಾಗಿತ್ತು ಒಟ್ಟು 35 ಸೈಕ್ಲಿಸ್ಟ್ ಗಳು ಭಾಗವಹಿಸಿದ್ದರು.
ಶಿವಳ್ಳಿ ಅವರು ರೈಡ್‌ಗೆ ಹೆಸರು ನೋಂದಾಯಿಸಿರಲಿಲ್ಲ. ಆದರೆ, ಸ್ನೇಹಿತರಿಗೆ ಬೀಳ್ಕೊಡುವ ಸಲುವಾಗಿ ಹುಬ್ಬಳ್ಳಿಯಿಂದ ಸೈಕಲ್ ಏರಿದ್ದರು. ಕೆಲ ಕಿ.ಮೀ. ದೂರ ಬಂದು ವಾಪಸ್ ಹೋಗುವುದಾಗಿ ತಿಳಿಸಿದ್ದರು. ಸೈಕಲ್ ಮೇಲಿನ ಪ್ರೀತಿಯಿಂದಾಗಿ ಶಿಗ್ಗಾವಿ ತನಕ ಶಿಗ್ಗಾವಿಯಿಂದ ಮೂರು ಕಿ.ಮೀ. ಮುಂದೆ ಹೋದಾಗ ಅವರು ದಿಢೀರನೆ ಕುಸಿದು ಬಿದ್ದು ಮೃತಪಟ್ಟರು. ನಮ್ಮ ತಂಡದಲ್ಲಿದ್ದ ವೈದ್ಯರು ಪರೀಕ್ಷೆ ಮಾಡಿದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Check Also
ಕರ್ತವ್ಯ ಜೊತೆಗೆ ಆರೋಗ್ಯದತ್ತ ಗಮನವಿರಲಿ- ಪಾಲಿಕೆ ಆಯುಕ್ತ ಉಳ್ಳಾಗಡ್ಡಿ
Spread the loveಹುಬ್ಬಳ್ಳಿ: ಪೊಲೀಸ್ ಇಲಾಖೆಯಿಂದ ಸಿಬ್ಬಂದಿಗಾಗಿ ಕ್ರೀಡಾಕೂಟ ಆಯೋಜಿಸುತ್ತಿರುವುದು ಒಳ್ಳೆಯ ಕೆಲಸ ಸಿಬ್ಬಂದಿ ಪ್ರತಿ ದಿನ ಒತ್ತಡದಲ್ಲಿ ಕೆಲಸ …