ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಸ್ವಂತ ಬಲದೊಂದಿಗೆ ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಗೆ ಬಂದಾಗ ಯಾವ ರೀತಿ ಸ್ವಾಗತ ಸಿಕ್ಕಿದೆ? ಅದು ಪಾಲಿಕೆ ಚುನಾವಣೆಯಲ್ಲಿ ಪ್ರತಿಬಿಂಬಸಲಿದೆ. ಬಿಜೆಪಿ ಮಿಷನ್ 60 ಆದ್ರೂ ಅನ್ನಲಿ, ಬೆಂಗಳೂರಿನಲ್ಲಿ ಮಿಷನ್ 150 ಯಾದ್ರು ಎನ್ನಲಿ. ಆದರೆ ಮೂರು ಪಾಲಿಕೆಯಲ್ಲಿ ನಾವೇ ಆಡಳಿತ ನಡೆಸೋದು ಎಂದರು.
ಮೈಸೂರು ವಿವಿ ಕುಲಪತಿ ಸಂಜೆ ನಂತರ ಕ್ಯಾಂಪಸ್ ನಲ್ಲಿ ಹೆಣ್ಣು ಮಕ್ಕಳು ಎಲ್ಲೂ ಓಡಾಡಬಾರದು ಅಂತಾರೆ. ಆಮೇಲೆ ಆದೇಶ ವಾಪಸ್ಸು ಪಡೆಯುತ್ತಾರೆ. ಹಾಗಾದರೆ ಸರ್ಕಾರ ಯಾಕೆ ಇರಬೇಕು. ವಿಶ್ವ ವಿದ್ಯಾಲಯದಲ್ಲೇ ಈ ರೀತಿ ಆದರೆ ಹೆಂಗೆ. ಸರ್ಕಾರ ಕೂಡಲೇ ಕುಲಪತಿ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ಯಾಂಗ್ ರೇಪ್ ಕುರಿತು ಸಚಿವ ಉಮೇಶ ಕತ್ತಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಗಳನ್ನು ಕೇಳಿದ್ದೀನಿ. ನಮ್ಮ ಗೃಹ ಮಂತ್ರಿಗಳ ಮೇಲೇಯೇ ಅದ್ಯಾವುದೋ ಕೇಸ್ ಇದೆಯಂತೆ. ಈ ಬಗ್ಗೆ ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ ಹೇಳಿದ್ದಾರೆ. ಇಂತಹ ಗೃಹ ಮಂತ್ರಿಗಳು ಇದ್ದಾಗಲೇ ರಾಜ್ಯದ ಆಡಳಿತ ಬಹಳ ಚೆನ್ನಾಗಿ ನಡೆಯುತ್ತೆ ಎಂದು ವ್ಯಂಗ್ಯವಾಡಿದರು.
Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …