ಹುಬ್ಬಳ್ಳಿ; ತನ್ನ ಹೆಂಡತಿ ಜೊತೆಗೆ ಜಗಳ. ತೆಗೆದಾಗ ಅತ್ತೆ ಬುದಿ ಹೇಳಲು ಬಂದಾಗ ಅಳಿಯನೋರ್ವ ಅತ್ತೆಯನ್ನು ಕಾಲಿನಿಂದ ಒದ್ದು ಹೊಡೆದು ಕೊಲೆ ಮಾಡಿದ ಘಟನೆ ಬುಧವಾರ ಬೆಳಗಿನ ಜಾಗ ಹುಬ್ಬಳ್ಳಿ ತಾಲೂಕಿನ ನೊಲ್ವಿ ಗ್ರಾಮದಲ್ಲಿ ನಡೆದಿದೆ.
ನೂಲ್ವಿ ಗ್ರಾಮದ ಚೆನ್ಬಯ್ಯಾನಮಠ ಹತ್ತಿರದ ನಿವಾಸಿ ಶಿವಾನಂದ ನಿಂಗಪ್ಪ ಜಾಲೀಕಟ್ಟಿ ಕುಡಿತಕ್ಕೆ ದಾಸನಾಗಿದ್ದ ಪ್ರತಿದಿನ ಕುಡಿದು ಹೆಂಡತಿಗೆ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದ್ದು ಮಂಗಳವಾರ ಸಹ ಹೆಂಡತಿ ಅನಿತಾ ಜೊತೆಗೆ ನೀನು ಸರಿಯಾಗಿ ಅಡುಗೆ ಮಾಡಲ್ಲ. ಬದುಕು ಮಾಡಕ ಬರಲ್ಲಾ ಅಂತಾ ಜಗಳವಾಗಿದ್ದಾನೆ. ನಂತರ ಬುಧವಾರ ಬೆಳಕಿನ ಜಾವ ಸಹ ಜಗಳ ತೆಗೆದುಕೊಂಡಿದ್ದಾನೆ. ಜಗಳ ವಿಕೋಪಕ್ಕೆ ಹೋಗಿದೆ. ಈ ನಡುವೆ ಅತ್ತೆ ಗಂಗವ್ವ ಶಿವನಗೌಡ ಸಂಕನಗೌಡರ ಜಗಳ ಬಿಡಿಸಲು ಬಂದಾಗ ನೀನು ಸಹ ಮಗಳಿಗೆ ಸಪೂರ್ಟ್ ಮಾಡತಿಯಾ ಅಂತಾ ಆಕ್ರೋಶಗೊಂಡು ಅತ್ತೆಗೆ ಕಾಲಿನಿಂದ ಒದ್ದು ಹೊಟ್ಟಿಗೆ ಬಲವಾಗಿ ಒಡೆದಿದ್ದಾನೆ. ಅತ್ತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಈ ಕುರಿತು ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Check Also
ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ
Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …