ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಖಿ ಕಟ್ಟಿದ ಬ್ರಹ್ಮಕುಮಾರಿ ಸಹೋದರಿಯರು

Spread the love

ಹುಬ್ಬಳ್ಳಿ: ಭಾನುವಾರ ಅಣ್ಣ ತಂಗಿಯ ಪವಿತ್ರ ಸಂಬಂಧವನ್ನು ಸಾರುವ ದಿನ. ಅದೇ ರಕ್ಷಾ ಬಂಧನ ದಿನ. ತಂಗಿಯರು ತನ್ನ ಅಣ್ಣಂದಿರಿಗೆ ರಾಖಿ ಕಟ್ಟಿ, ಕಾಲಿಗೆ ಸಮಸ್ಕಾರ ಮಾಡುತ್ತಾರೆ. ಅದರಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬ್ರಹ್ಮಕುಮಾರಿಯರು ರಾಖಿ ಕಟ್ಟಿ ಶುಭ ಹಾರೈಸಿದ್ದಾರೆ. ಬೆಳಿಗ್ಗೆಯಿಂದಲೇ ಹುಬ್ಬಳ್ಳಿ ಆದರ್ಶನಗರದಲ್ಲಿನ ಮುಖ್ಯಮಂತ್ರಿ ಮನೆ ಮುಂದೆ ಸೇರಿರುವ ಜನರು ಸಿಎಂಗೆ ಅಹವಾಲು ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿಯ ಆದರ್ಶನಗರದ ಮನೆ ಬಳಿ ಬಸವರಾಜ ಬೊಮ್ಮಾಯಿ ಸಾರ್ವಜನಿಕರಿಂದ ಅಹವಾಲುವನ್ನು ಸ್ವೀಕರಿಸಿದರು.
ಈ ವೇಳೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಬಗ್ಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿಯಲ್ಲಿ ಚುನಾವಣೆ ನೀತಿ ಸಂಹಿತೆ ಇದೆ. ಹೀಗಾಗೇ‌ ನಾನು ಏನನ್ನು ಮಾತನಾಡೋದಿಲ್ಲ. ವಿಪಕ್ಷಗಳ ನಿಯೋಗ ಜಾತಿಗಣತಿ ಪ್ರಧಾನಿಗಳ ಭೇಟಿಗೆ ಮುಂದಾಗಿವೆ. ಆ ವಿಷಯ ಸದ್ಯ ನ್ಯಾಯಾಲಯದಲ್ಲಿದೆ. ಪ್ರಧಾನಿಗಳ ಭೇಟಿ ಮಾಡೋಕೆ ಅವಕಾಶವಿದೆ. ಭೇಟಿ ಮಾಡಲಿ ಅಂತ ಹೇಳಿದ್ದಾರೆ
ಜನರಿಂದ ಅಹವಾಲು ಸ್ವೀಕರಿಸಿದರು‌. ಹುಬ್ಬಳ್ಳಿಯ ಏರ್ ಪೋರ್ಟ್​ಗೆ ಭೇಟಿ ನೀಡಿದರು. ವೆಂಕಯ್ಯ ನಾಯ್ಡು ಜತೆ ಕೇಂದ್ರ ಸಚಿವ ಜೋಶಿ ಸಹೋದರನ ಮಗನ ಮದುವೆಯಲ್ಲಿ ಭಾಗಿಯಾಗುತ್ತಾರೆ. ಬಳಿಕ ಕೆಲ ಖಾಸಗಿ ಕಾರ್ಯಕ್ರಮಗಳಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನತ್ತ ಪಯಣ ಬೆಳೆಸುತ್ತಾರೆ.


Spread the love

Leave a Reply

error: Content is protected !!