ಹುಬ್ಬಳ್ಳಿ; ಮಾಜಿ ಸಚಿವ ಜನಾರ್ದನ ರೆಡ್ಡಿ ಸುಮಾರು 3 ವರ್ಷದ ಬಳಿಕ ತವರೂರು ಬಳ್ಳಾರಿಗೆ ಕಾಲಿಟ್ಟಿದ್ದು ಶುಕ್ರವಾರ ಕುಟುಂಬಸ್ಥರ ಜತೆ ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡರು.
ಬೆಳಗ್ಗಿನ ಜಾವವೇ ಬಳ್ಳಾರಿಗೆ ಬಂದಿರುವ ಗಾಲಿ ಜನಾರ್ದನ ರೆಡ್ಡಿ, ಬಳ್ಳಾರಿಯ ಸಿರುಗುಪ್ಪ ರಸ್ತೆಯ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಪೂಜೆಯಲ್ಲಿ ಭಾಗಿಯಾದರು. ಕುಟುಂಬಸ್ಥರ ಜತೆ ಪೂಜೆಯಲ್ಲಿ ಭಾಗಿಯಾದ ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದಿರುವ ಬಗ್ಗೆ ಸಾಕಷ್ಟು ಅವರ ಹಿಂಬಾಲಕರು ಸಂತಸ ವ್ಯಕ್ತಪಡಿಸಿದರು.
ಕುಟುಂಬ ಸಮೇತರಾಗಿ ಆಗಮಿಸಿದ್ದು, ಕುಟುಂಬಸ್ಥರ ಜತೆ ಭಕ್ತಿ ಭಾವದಿಂದ ಲಕ್ಷ್ಮಿಗೆ ಪೂಜೆ ಸಲ್ಲಿಸಿದ್ದಾರೆ.