Breaking News

ಕೋವಿಡ್ ಹಿನ್ನಲೆಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಭಕ್ತರಿಗಿಲ್ಲ ಛಬ್ಬಿ ಗಣೇಶನ ದರ್ಶನ

Spread the love

ಕೋವಿಡ್ 19 ನಿಯಂತ್ರಣ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮೊಹರಾಂ ಹಾಗೂ ಗಣೇಶ ಹಬ್ಬ ಆಚರಿಸುವ ಸಂಬಂದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಛಬ್ಬಿ ಗ್ರಾಮದ ಪ್ರಸಿದ್ದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೊಹರಾಂ ಆಚರಣೆ ಕುರಿತು ಉಪವಿಭಾಗಾಧಿಕಾರಿ ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಛಬ್ಬಿ ಗ್ರಾಮ‌ ಪಂಚಾಯಿತಿ ಸಭಾ ಭವನದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಓದಿ ಸಾರ್ವಜನಿಕರಿಗೆ ತಿಳಿಸಲಾಯಿತು. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಮಖಗವಸು ಕಡ್ಡಾಯವಾಗಿ ಧರಿಸಬೇಕು. ಮೊಹರಾಂ ಪಾರ್ಥನೆಯನ್ನು 60 ವರ್ಷ ಮೇಲ್ಪಟ್ಟವರು ಹಾಗೂ ಮಕ್ಕಳು ಮನೆಯಲ್ಲಿಯೇ ಸಲ್ಲಿಸಬೇಕು. ಮಸಿದೀಗಳಲ್ಲಿ ಜನದಟ್ಟಣೆ ಸೇರಿದಂತೆ ಸರತಿಯ ಆಧಾರದಲ್ಲಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಯಾವುದೇ ರೀತಿ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ.
ಛಬ್ಬಿಯಲ್ಲಿ ಸಾಂಪ್ರದಾಯಕವಾಗಿ ಕುಲಕರ್ಣಿ ಮನೆತನದವರು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬಹುದು. ಆದರೆ ಸಾರ್ವಜನಿಕರು ಭಾಗವಹಿಸಲು ಅವಕಾಶವಿಲ್ಲ. ಹೊರ ರಾಜ್ಯ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಗಣೇಶನ ದರ್ಶನಕ್ಕೆ ಅವಕಾಶವಿಲ್ಲ. ಸಾರ್ವಜನಿಕ ದರ್ಶನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೋವಿಡ್ ನಿಯಮಾನುಸಾರ ಗಣೇಶೋತ್ಸವ ಆಚರಿಸುವುದಾಗಿ ಕುಲಕರ್ಣಿ ಮನೆತನದವರು ಸಭೆಗೆ ತಿಳಿಸಿದರು.
ತಹಶಿಲ್ದಾರ ಪ್ರಕಾಶ್ ನಾಸಿ, ಗ್ರಾ.ಪಂ. ಅಧ್ಯಕ್ಷೆ ಗೌರವ್ವ ಕುರಬರ್, ಉಪಾಧ್ಯಕ್ಷ ರವಿ ಹುಲ್ಲಂಬಿ, ಕಂದಾಯ ನಿರೀಕ್ಷಕ ದಾನೇಶ್, ಪಿ.ಡಿ.ಓ.ಹರ್ಷ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.


Spread the love

About Karnataka Junction

[ajax_load_more]

Check Also

ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ

Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …

Leave a Reply

error: Content is protected !!