Breaking News

ಅಫ್ಘಾನಿಸ್ತಾನ್ ತಾಲಿಬಾನ್ ವಶಕ್ಕೆ- ಅಫ್ಘಾನ್​ ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳಿಂದ ದುಃಖ

Spread the love

 • ಹುಬ್ಬಳ್ಳಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಹಿನ್ನೆಲೆ ಧಾರವಾಡದಲ್ಲಿರುವ ಅಫ್ಘಾನ್​ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಕೃಷಿ ವಿವಿಯಲ್ಲಿ ಸಂಶೋಧನಾ ಹಾಗೂ ಸ್ನಾತಕೋತ್ತರ ಪದವಿ ಮಾಡಲು ವಿದ್ಯಾರ್ಥಿಗಳು ಬಂದಿದ್ದಾರೆ. ಅಫ್ಘಾ ನಿಸ್ತಾನದಿಂದ ಧಾರವಾಡಕ್ಕೆ ವಿದ್ಯಾಭ್ಯಾಸಕ್ಕೆ ಬಂದಿರುವ ವಿದ್ಯಾರ್ಥಿಗಳ ಪೈಕಿ ಸದ್ಯ 15 ವಿದ್ಯಾರ್ಥಿಗಳಲ್ಲಿ 5 ಜನ ಕೊರೊನಾ ಹಿನ್ನೆಲೆ ವಾಪಸ್ ಹೋಗಿದ್ದರು.‌ ಉಳಿದ 10 ಜನ ವಿದ್ಯಾರ್ಥಿಗಳು ಧಾರವಾಡ ಕೃಷಿ ವಿವಿ ಹಾಸ್ಟೆಲ್​ನಲ್ಲಿದ್ದಾರೆ.
  ಇನ್ನು ಕುಟುಂಬದ ಜೊತೆ ಮಾತನಾಡಿದ್ದೇವೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ತಾಲಿಬಾನ್ ಸಂಘಟನೆ ಯಾರಿಗೂ ಏನೂ ಮಾಡಲ್ಲ ಎಂದು ಘೋಷಣೆ ಮಾಡಿದೆ. ಹೀಗಾಗಿ ನಾವು ಸ್ವಲ್ಪ ನಿರಾಳವಾಗಿದ್ದೇವೆ. ಆದರೆ, ವಾಪಸ್ ಹೋದ 5 ವಿದ್ಯಾರ್ಥಿಗಳು ಬರುವುದು ಕಷ್ಟ ಸದ್ಯ ವಿಮಾನ ಬಂದ್ ಆಗಿವೆ. ಭಯ ಕೂಡಾ ಇದೆ, ನಮ್ಮ ಕುಟುಂಬಗಳು ಅಲ್ಲೇ ಇವೆ. ಅಲ್ಲಿ ಎಂತಹ ಸ್ಥಿತಿ ಇದೆ ಎಂದು ಕುಟುಂಬದವರು ಹೇಳುತಿದ್ದಾರೆ ಎಂದರು.

Spread the love

About Karnataka Junction

  Check Also

  ನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ಸಿದ್ಧತೆ

  Spread the loveನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ಸಿದ್ಧತೆ ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜಿನಲ್ಲಿ …

  Leave a Reply

  error: Content is protected !!