ಹುಬ್ಬಳ್ಳಿ- ನಗರದ ಗೋಕುಲ ರಸ್ತೆಯ ವಿಮಾನ ನಿಲ್ದಾಣದಿಂದ ಒಂದೇ ವಿಮಾನದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ , ಮುಖಂಡರಾದ ಪ್ರಕಾಶ ಹುಕ್ಕೇರಿ ಹಾಗೂ ಪ್ರಭಾಕರ್ ಕೋರೆ ನವದೆಹಲಿಗೆ ಸೋಮವಾರ ಮಧ್ಯಾಹ್ನ ಪ್ರಯಾಣ ಬೆಳೆಸಿದರು.
ಮೂವರ ನಾಯಕರು ಗಾಜಿಯಾಭಾದ್ ಗೆ ತೆರಳುತ್ತಾರೆ ಎಂಬ ಮಾಹಿತಿ ಇದ್ದು ಮೂವರ ನಾಯಕರು ಒಂದೇ ವಿಮಾನ ಮೂಲಕ ಅದು ಒಂದೇ ಸ್ಥಳಕ್ಕೆ ಹೋಗುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಶನಿವಾರ ಅಷ್ಟೇ ಹುಬ್ಬಳ್ಳಿಯ
ಬಾದಾಮಿನಗರದಲ್ಲಿನ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಪ್ರಕಾಶ ಹುಕ್ಕೇರಿ ಭೇಟಿ ನೀಡಿಗುಪ್ತ ಗುಪ್ತ ಚರ್ಚೆ ನಡೆಸಿದ್ದರು.
ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಿಂದ ದೂರ ಉಳಿಯುವ ಮೂಲಕ ಮಾಜಿ ಮುಖ್ಯಮಂತ್ರಿಗಳು ಶಾಸಕರಾದ ಜಗದೀಶ್ ಶೆಟ್ಟರ್ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆ ನಡೆಯುತಿದ್ದು ಒಂದು ಕಡೆ ಜನತಾ ಪರಿಹಾರ ಹಿನ್ನೆಲೆಯಲ್ಲಿವುಳ್ಳವರು ಮುಖ್ಯಮಂತ್ರಿಯಾಗಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಸಂಪುಟದಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಿದ್ದು. ಇದರ ಜೊತೆಗೆ ಖಾತೆ ಹಂಚಿಕೆಯಲ್ಲಿಯೂ ಅಪಸ್ವರ ಕೇಳಿಬರುತ್ತಿರುವುದರಿಂದ ಸಾಕಷ್ಟು ಹತ್ತು ಹಲವಾರು ಅನುಮಾನ ಎಡೆ ಮಾಡುಕೊಡುತ್ತಿದೆ.
Check Also
ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ
Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …